ಹವಾಮಾನ ಬದಲಾವಣೆ; ಜಾಗತಿಕ ಸಹಕಾರ ಅಗತ್ಯ : ಪ್ರಧಾನಿ ಮೋದಿ
ಜೋಹಾನ್ಸ್‌ಬರ್ಗ್, 23 ನವೆಂಬರ್ (ಹಿ.ಸ.) : ಆ್ಯಂಕರ್ : ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ–20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಯ ಅಗತ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ಜಗತ್ತು ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳಿಗೆ ಸಜ್ಜಾಗಲು ಬಲವ
Pm


ಜೋಹಾನ್ಸ್‌ಬರ್ಗ್, 23 ನವೆಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ–20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಯ ಅಗತ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು. ಜಗತ್ತು ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳಿಗೆ ಸಜ್ಜಾಗಲು ಬಲವಾದ ಜಾಗತಿಕ ಸಹಕಾರ ಅತ್ಯವಶ್ಯಕ ಎಂದು ಅವರು ಹೇಳಿದರು.

ಈ ಕುರಿರು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಧಿವೇಶನದ ವಿವರಗಳನ್ನು ಹಂಚಿಕೊಂಡು, “ಹವಾಮಾನ ಬದಲಾವಣೆ ಎದುರಿಸಲು ಶಕ್ತಿಯುತ ಜಗತ್ತನ್ನು ನಿರ್ಮಿಸುವುದು, ಇಂಧನ ಪರಿವರ್ತನೆಗೆ ವೇಗ ನೀಡುವುದು ಹಾಗೂ ಆಹಾರ ಭದ್ರತೆಯನ್ನು ಬಲಪಡಿಸುವುದು ನಮ್ಮ ಸಾಮೂಹಿಕ ಕರ್ತವ್ಯ” ಎಂದು ಪ್ರಸ್ತಾಪಿಸಿದರು. ಭಾರತವು ಎಲ್ಲರನ್ನೂ ಒಳಗೊಂಡ, ಜನ–ಕೇಂದ್ರಿತ ಭವಿಷ್ಯ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.

2023 ರ ಭಾರತ ಜಿ–20 ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ವಿಪತ್ತು ಅಪಾಯ ಕಡಿತ ಕಾರ್ಯಗುಂಪೆ ಕುರಿತು ಅವರು ಮತ್ತೊಮ್ಮೆ ನೆನಪಿಸಿದರು. ಈ ಕ್ಷೇತ್ರಕ್ಕೆ ಆದ್ಯತೆ ನೀಡಿದಕ್ಕಾಗಿ ದಕ್ಷಿಣ ಆಫ್ರಿಕಾವನ್ನು ಶ್ಲಾಘಿಸಿದ ಮೋದಿ, “ನೈಸರ್ಗಿಕ ವಿಕೋಪಗಳು ಮಾನವತೆಗೆ ದೊಡ್ಡ ಸವಾಲು. ಇದನ್ನು ಎದುರಿಸಲು ಜಾಗತಿಕ ಸಹಕಾರ ಅನಿವಾರ್ಯ” ಎಂದು ಅಭಿಪ್ರಾಯಪಟ್ಟರು.

ಬಾಹ್ಯಾಕಾಶ ತಂತ್ರಜ್ಞಾನವನ್ನು ಮಾನವೀಯ ಅಗತ್ಯಗಳಿಗೆ ಬಳಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟ ಅವರು, ಜಿ–20 ಮುಕ್ತ ಉಪಗ್ರಹ ದತ್ತಾಂಶ ಪಾಲುದಾರಿಕೆ ಯೋಜನೆಯನ್ನು ಪ್ರಸ್ತಾಪಿಸಿದರು. ಅದೇ ವೇಳೆ, ಹವಾಮಾನ ಬದಲಾವಣೆಗೆ ಅಗತ್ಯವಿರುವ ಸಕಾಲಿಕ ಹಾಗೂ ಕೈಗೆಟುಕುವ ಆರ್ಥಿಕ ನೆರವು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande