ಗರ್ಭಿಣಿ ಗೋಮಾತೆಗಾಗಿ ಸೀಮಂತ ಕಾರ್ಯ
ಗದಗ, 23 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ನಗರ ಗಂಗಿಮಡಿ–ಹಿರೇಹಂದಿಗೋಳ ಮಾರ್ಗದಲ್ಲಿರುವ ಗೋಶಾಲೆಯಲ್ಲಿ ಭಕ್ತಿ–ಶ್ರದ್ದಾಭಕ್ತಿಗಳ ಸಂಕಲನವಾಗಿದ್ದ ವಿಶಿಷ್ಟ ‘ಗೋ ಸೀಮಂತ’ ಕಾರ್ಯಕ್ರಮ ಜರುಗಿತು. ಗರ್ಭಿಣಿ ಗೋಮಾತೆಗೆ ಶ್ರದ್ಧೆಯಿಂದ ಸೀಮಂತ ನೆರವೇರಿಸಿ, ಗೋಶಾಲೆಯ ಮೂರು ಕರುಗಳಿಗೆ ಬಸವ, ಕೃಷ್ಣ ಮತ್ತ
ಫೋಟೋ


ಗದಗ, 23 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ನಗರ ಗಂಗಿಮಡಿ–ಹಿರೇಹಂದಿಗೋಳ ಮಾರ್ಗದಲ್ಲಿರುವ ಗೋಶಾಲೆಯಲ್ಲಿ ಭಕ್ತಿ–ಶ್ರದ್ದಾಭಕ್ತಿಗಳ ಸಂಕಲನವಾಗಿದ್ದ ವಿಶಿಷ್ಟ ‘ಗೋ ಸೀಮಂತ’ ಕಾರ್ಯಕ್ರಮ ಜರುಗಿತು.

ಗರ್ಭಿಣಿ ಗೋಮಾತೆಗೆ ಶ್ರದ್ಧೆಯಿಂದ ಸೀಮಂತ ನೆರವೇರಿಸಿ, ಗೋಶಾಲೆಯ ಮೂರು ಕರುಗಳಿಗೆ ಬಸವ, ಕೃಷ್ಣ ಮತ್ತು ಗೌರಿ ಎಂದು ನಾಮಕರಣ ಮಾಡುವ ಮೂಲಕ ಗೋ-ಸಂರಕ್ಷಣೆ ಸಂದೇಶ ಹರಡಲಾಯಿತು.

ಈ ಕಾರ್ಯಕ್ರಮವನ್ನು ಗೋ-ಸೇವಾ ಗತಿ ವಿಧಿ ಉತ್ತರ ಪ್ರಾಂತ, ಗೋ-ಜೈವಿಕ ಕೃಷಿ ಅನುಸಂಧಾನ ಕೇಂದ್ರ ಟ್ರಸ್ಟ್ (ರಿ) ಗದಗ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಜಂಟಿಯಾಗಿ ಆಯೋಜಿಸಿತ್ತು.

ಶುಚಿಗೊಳಿಸಿದ ದೇವಣಿಯಲ್ಲಿ ಗೀರ್ ತಳಿಯ ಗರ್ಭಿಣಿ ಗೋಮಾತೆಯನ್ನು ಮುತ್ತೈದೆಯರು ಕುಂಭದೊಂದಿಗೆ, ತಳೀರು ಹಾಗೂ ತೋರಣಗಳಿಂದ ಅಲಂಕೃತ ಮಾಡಿದ್ದ ಮಂಟಪಕ್ಕೆ ಕರೆತಂದು ಪಾದಪೂಜೆ ನೆರವೇರಿಸಿದರು.

ನಂತರ ಕುಂಕುಮ–ಅರಿಶಿಣ ಹಚ್ಚಿ, ಸೀರೆ ಉಡಿಸಿ, ಉಡಿ ತುಂಬಿ, ಬೆಲ್ಲ ಅಕ್ಕಿಯೊಂದಿಗೆ ಪಶು ಆಹಾರ ನೀಡಿ ನಮಿಸಿದರು.

ಅಲಂಕೃತ ತೊಟ್ಟಿಲಿನಲ್ಲಿ ಕರುಗಳಿಗೆ ನಾಮಕರಣ ಕಾರ್ಯಕ್ರಮವೂ ಭವ್ಯವಾಗಿ ಜರುಗಿತು. ಮುತ್ತೈದೆಯರು ಜೋಗುಳ ಹಾಡುತ್ತಾ ಕರುಗಳಿಗೆ ‘ಬಸವ’, ‘ಕೃಷ್ಣ’, ‘ಗೌರಿ’ ಎಂಬ ಹೆಸರುಗಳನ್ನು ನೀಡಿದರು.

ರಜನಿ ಪಂಥರ, ನಾಗವೇಣಿ ಕಟ್ಟಿಮನಿ, ಅಶ್ವಿನಿ ಜಗತಾಪ, ವೀಣಾ ಕಾವೇರಿ, ರಂಜನಾ ಕೋಟಿ, ವಿಜಯಾ ನವಲೆ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮುತ್ತೈದೆಯರು ಕುಂಭಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾಗವಹಿಸಿದ ಎಲ್ಲರಿಗೂ ಉಡಿ ಹಂಚಿ ಗೌರವಿಸಲಾಯಿತು. ನಂತರ ಮಹಾ ಅನ್ನಸಂತರ್ಪಣೆ ಜರುಗಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ರವಿ ಹಡಪದ, ಆರ್.ಎಸ್.ಎಸ್ ಪ್ರಮುಖರಾದ ನರಸಿಂಹ ಕಾಮಾರ್ತಿ, ಮೋಹನ ಮಾಳಶೆಟ್ಟಿ, ಗುರುಸಿದ್ದಪ್ಪ ಕೊಣ್ಣೂರ, ಚೇತನ್ ಮೇಹರ–ವಾಡೆ ಮುಂತಾದವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande