


ಹೊಸಪೇಟೆ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಟಾರ್ಕ್ ಅಕಾಡೆಮಿಯಿಂದ 2025-26 ನೀಡಲಾಗುವ ರಾಜ್ಯ ಮಟ್ಟದ 'ಅಪರ್ಣ ನಿರೂಪಣ ರತ್ನ' ಪ್ರಶಸ್ತಿಗೆ ಹೊಸಪೇಟೆಯ 88 - ಮುದ್ಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ್.ಕೆ. ರವರಿಗೆ ಬೆಂಗಳೂರಿನ ಶಿಕ್ಷಕರ ಭವನದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ' ದಲ್ಲಿ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
ಐತಿಹಾಸಿಕ ಹಂಪಿ ಉತ್ಸವದ ಮುಖ್ಯ ವೇದಿಕೆ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ವಿವಿಧ ಸಭೆ ಸಮಾರಂಭಗಳಲ್ಲಿ ತಮ್ಮ ವಿಶಿಷ್ಟ ಕಂಠಸಿರಿ, ಪದಸಿರಿ ಸಂಪತ್ತಿನಿಂದ ಯಶಸ್ವಿಯಾಗಿ ನಿರೂಪಿಸಿ, ನಿರ್ವಹಿಸಿ, ವೇದಿಕೆಗಳಿಗೆ ನಿರೂಪಣೆಯ ಸೊಬಗನ್ನು ಹೆಚ್ಚಿಸುವ ನಿರೂಪಣಾ ಕೌಶಲ್ಯವನ್ನು ಗುರುತಿಸಿ 'ಅಪರ್ಣ ನಿರೂಪಣ ರತ್ನ' ರಾಜ್ಯ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸೂರ್ಯ ಫೌಂಡೇಶನ್ ಹಾಗೂ ಸ್ಟಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ್ ನವೋದಯ, ಪ್ರಧಾನ ಸಂಚಾಲಕರಾದ ಪಿ.ಮಹೇಶ್ ತರಬೇತುದಾರರು ಬಿ.ಕೆ.ಸತೀಶ್ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯ ಮಟ್ಟದ ಅಪರ್ಣ ನಿರೂಪಣಾ ಪ್ರಶಸ್ತಿಗೆ ಭಾಜನರಾದ ಬಸವರಾಜ್ ಕೆ. ಅವರನ್ನು ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಅಭಿನಂದಿಸಿ ಶುಭ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಚಲನಚಿತ್ರ ನಟರಾದ ಸಾಯಿಪ್ರಕಾಶ್, ಖ್ಯಾತ ತರಬೇತುದಾರರಾದ ವೇಣು, ಸೇರಿದಂತೆ ಗಣ್ಯರು ಇದ್ದರು ಹಾಗೆಯೇ ಹೊಸಪೇಟೆ ಯಿಂದ ಶಿಕ್ಷಣ ಇಲಾಖೆಯ ಕೆ.ಮಲ್ಲೇಶಪ್ಪ, ಎಸ್.ಬಸವರಾಜ, ಸಿ.ಮಲ್ಲಿಕಾರ್ಜುನ, ಯು.ಖಾಜ, ಅನ್ವರ್ ಅಲಿ, ಶ್ರೀಕಾಂತ್, ಎಸ್.ರಮೇಶ್, ಎ.ಎಲ್.ಓಮೇಶ್, ಚೌಡಪ್ಪ ಅಭಿನಂದಿಸಿ ಶುಭ ಹಾರೈಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್