
ಡೆಹ್ರಾಡೂನ್, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಭೂ–ವೈಕುಂಠ ಎಂದು ಕರೆಯಲ್ಪಡುವ ಉತ್ತರಾಖಂಡದ ಬದರಿನಾಥ ದೇವಾಲಯವು ಚಳಿಗಾಲಕ್ಕಾಗಿ ನವೆಂಬರ್ 25ರಂದು ಮುಚ್ಚಲಿದ್ದು, ಅದರ ಪೂರ್ವ ಸಿದ್ಧತೆಗಳು ಧಾಮದಲ್ಲಿ ವೇಗ ಪಡೆದುಕೊಂಡಿವೆ. ಗಣೇಶ ದೇವಾಲಯದ ಬಾಗಿಲು ಮುಚ್ಚುವ ಪ್ರಕ್ರಿಯೆ ನವೆಂಬರ್ 21ರಂದು ಆರಂಭವಾದ ನಂತರ, ಇಂದು ಬದರಿನಾಥ ಧಾಮದಲ್ಲಿ ನಡೆಯುವ ಖಡ್ಗ (ಕತ್ತಿ) ಮತ್ತು ಗ್ರಂಥ–ಪೂಜೆ ಬಳಿಕ ವೇದ ಸ್ತುತಿಗೀತೆಗಳ ಪಠಣ ನಿಲ್ಲಿಸಲಾಗುತ್ತದೆ.
ನಾಳೆ (ನವೆಂಬರ್ 24) ಲಕ್ಷ್ಮೀ ದೇವಿಗೆ ಕಧೈ ಭೋಗ ಅರ್ಪಿಸಿದ ನಂತರ, ಅವರನ್ನು ಗರ್ಭಗುಡಿಗೆ ಬರಲು ಆಹ್ವಾನಿಸಲಾಗುತ್ತದೆ. ನಂತರ ನವೆಂಬರ್ 25ರಂದು ಮಧ್ಯಾಹ್ನ 2:56ಕ್ಕೆ ಶುಭ ಮೂರ್ತದಲ್ಲಿ ದೇವಾಲಯದ ಬಾಗಿಲು ಚಳಿಗಾಲಕ್ಕೆ ಮುಚ್ಚಲಾಗುತ್ತದೆ. ಲಕ್ಷ್ಮೀ ಮತ್ತು ನಾರಾಯಣ ಮೂರ್ತಿಗಳನ್ನು ತುಪ್ಪದ ಕಂಬಳಿಯಿಂದ ಹೊದಿಸುವ ಸಂಪ್ರದಾಯವೂ ಇದೇ ದಿನ ನೆರವೇರಲಿದೆ.
ಬದರಿನಾಥ ಧಾಮವನ್ನು ಹೂವಿನ ಅಲಂಕರಣಗಳಿಂದ ಮೆರಗುಗೊಳಿಸಲಾಗುತ್ತಿದ್ದು, ಪೂಜಾರಿಗಳು ಮತ್ತು ಸ್ಥಳೀಯರು ಸಿದ್ಧತೆಗಳಲ್ಲಿ ತೊಡಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಬದ್ರಿ–ಕೆದಾರ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa