ಬಿಜೆಪಿಯ ‘ಮತ ಕಳ್ಳತನ’ ಈಗ ಮಾರಕ ರೂಪ : ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, 23 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಎಸ್ಐಆರ್ ಜಾರಿಯ ಕುರಿತು ಹೊಸ ವಿವಾದ ಎದ್ದಿರುವ ವೇಳೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಖರ್ಗೆ ಅವರು ಸಾಮಾಜಿಕ ಜಾಲತ
Kharge


ಬೆಂಗಳೂರು, 23 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಎಸ್ಐಆರ್ ಜಾರಿಯ ಕುರಿತು ಹೊಸ ವಿವಾದ ಎದ್ದಿರುವ ವೇಳೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, “ಬಿಜೆಪಿಯ ಮತ ಕಳ್ಳತನ ಈಗ ಮಾರಕ ರೂಪ ಪಡೆದಿದೆ. ಕೆಲಸದ ಅತಿಯಾದ ಒತ್ತಡದಿಂದ ಬಿಎಲ್‌ಒಗಳು ಮತ್ತು ಮತಗಟ್ಟೆ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ” ಎಂದು ಹೇಳಿದ್ದಾರೆ.

ತಮ್ಮ “ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಪ್ರತಿಯೊಂದು ಕುಟುಂಬಕ್ಕೂ ನನ್ನ ಆಳವಾದ ಸಂತಾಪಗಳು. ನೆಲದ ಮೇಲಿನ ವಾಸ್ತವಿಕ ಸಂಖ್ಯೆಗಳು ಈಗ ವರದಿ ಆಗುತ್ತಿರುವುದಕ್ಕಿಂತ ಹೆಚ್ಚಿನವು. ಈ ಕುಟುಂಬಗಳಿಗೆ ನ್ಯಾಯ ದೊರೆತೀತೇ?” ಎಂದು ಪ್ರಶ್ನಿಸಿದ್ದಾರೆ.

ಖರ್ಗೆ ಅವರು ಚುನಾವಣಾ ಆಯೋಗದ ವಿರುದ್ಧವೂ ಟೀಕೆ ನಡೆಸಿದ್ದು, “ಬಿಜೆಪಿ ಕದ್ದ ಅಧಿಕಾರದ ಫಲ ಅನುಭವಿಸುತ್ತಿದೆ, ಆದರೆ ECISVEEP ಈ ಎಲ್ಲವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದೆ” ಎಂದು ಹೇಳಿದ್ದಾರೆ.

ಎಸ್ಐಆರ್ ಜಾರಿಗೆ ವಿರೋಧ ವ್ಯಕ್ತಪಡಿಸಿದ ಖರ್ಗೆ, “ಯೋಜನೆ ಇಲ್ಲದೆ, ಆತುರದಲ್ಲಿ SIR ಅನ್ನು ಬಲವಂತವಾಗಿ ಜಾರಿಗೆ ತರುವುದು, ನೋಟು ರದ್ದತಿ ಮತ್ತು ಕೊರೊನಾ ಲಾಕ್‌ಡೌನ್ ಅನ್ನು ನೆನಪಿಸುತ್ತದೆ. ಈ ರೀತಿಯ ನಿರ್ಧಾರಗಳು ಸಂಸ್ಥೆಗಳನ್ನು ಒತ್ತಡಕ್ಕೆ ತಳ್ಳುತ್ತವೆ” ಎಂದು ಹೇಳಿದ್ದಾರೆ.

ಅಧಿಕಾರ ದುರುಪಯೋಗ, ಅಧಿಕ ಒತ್ತಡ ಮತ್ತು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕ್ರಮಗಳಿಂದ ಸಂಸ್ಥೆಗಳು ಕುಸಿಯುತ್ತಿವೆ. ಇದು ಸಂವಿಧಾನದ ಅವಮಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ” ಎಂದು ಹೇಳಿದ್ದಾರೆ.

ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವದ ಕೊನೆಯ ಕಂಬಗಳೇ ಕುಸಿಯುವ ಅಪಾಯವಿದೆ. ಎಸ್ಐಆರ್ ಹಾಗೂ ಮತ ಕಳ್ಳತನದ ಬಗ್ಗೆ ಮೌನವಾಗಿರುವ ಪ್ರತಿಯೊಬ್ಬರೂ BLO ಗಳ ಆತ್ಮಹತ್ಯೆಗೆ ಹೊಣೆಗಾರರು ಎಂದು ಆರೋಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande