
ನವದೆಹಲಿ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಚರ್ಚೆ ನಡೆಸಿದರು.
ಬಿಹಾರ ಚುನಾವಣೆಯನ್ನು ರಾಷ್ಟ್ರೀಯ ರಾಜಕಾರಣದಲ್ಲಿ ದಿಕ್ಕುನಿರ್ಧಾರಕವೆಂದು ಪರಿಗಣಿಸಲಾಗಿರುವ ಸಂದರ್ಭದಲ್ಲಿ, ಆ ಚುನಾವಣೆಯನ್ನು ಸಮರ್ಥವಾಗಿ ಮುನ್ನಡೆಸಿ ಮಿತ್ರಪಕ್ಷಗಳ ಐತಿಹಾಸಿಕ ಜಯಕ್ಕೆ ಬುನಾದಿ ಹಾಕಿದ ಅಮಿತ್ ಶಾ ಅವರ ತಂತ್ರಜ್ಞಾನ ಮತ್ತು ಚುನಾವಣೆ ನಿರ್ವಹಣಾ ಕೌಶಲ್ಯಕ್ಕೆ ವಿಜಯೇಂದ್ರ ಅವರು ಅಭಿನಂದನೆ ಸಲ್ಲಿಸಿದರು. ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣೆಯಾಗಿರುವ ನಾಯಕರಲ್ಲಿ ಅಮಿತ್ ಶಾ ಪ್ರಮುಖರಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಭೇಟಿಯ ವೇಳೆ ಕರ್ನಾಟಕದ ರಾಜಕೀಯದ ಪ್ರಸ್ತುತ ಬೆಳವಣಿಗೆಗಳ ಕುರಿತು ಸಚಿವರಿಗೆ ವಿವರಿಸಲಾಗಿದ್ದು, ರಾಜ್ಯದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಅಮಿತ್ ಶಾ ಅವರಿಂದ ಅಗತ್ಯ ಮಾರ್ಗದರ್ಶನ ಪಡೆದಿರುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa