
ಚಿತ್ರದುರ್ಗ, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಬಹುವಾರ್ಷಿಕ ಹಣ್ಣಿನ ಬೆಳೆಗಳು, ತೋಟದ ಬೆಳೆಗಳು, ಹೂವಿನ ಬೆಳೆಗಳ ಹೊಸ ತೋಟ ನಿರ್ಮಾಣಕ್ಕೆ 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡಲು ಇಚ್ಚಿಸುವ ರೈತರು ತೋಟಗಾರಿಕೆ ಇಲಾಖೆಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳನ್ನು ಕೂಡಲೇ ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ಹೆಸರುಗಳನ್ನು ಸೇರ್ಪಡಿಸಬಹುದಾಗಿದೆ.
2026-27ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಅನುಮೋದನೆ ಪಡೆಯಲು ಗ್ರಾಮ ಸಭೆಗಳು ನವೆಂಬರ್ 30 ರವರೆಗೂ ನಡೆಯುವುದರಿಂದ ಆಸಕ್ತ ರೈತರು ಕೂಡಲೇ ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆಕಾಶ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa