
ಕೊಪ್ಪಳ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ಕಾಯ್ದೆ ಅಥವಾ ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ ಬಾಕಿ ಉಳಿದ ಡಿ.ಎಸ್.ಎ. (ಇಲಾಖಾ ಶಾಸನ) ಪ್ರಕರಣಗಳ ಇತ್ಯರ್ಥಕ್ಕೆ ಸಾರಿಗೆ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.
1991-1992 ರಿಂದ 2019-2020 ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆ/ ನಿಯಮಗಳ ಉಲ್ಲಂಘನೆ ಸಂಬಂದ ದಾಖಲಾಗಿ ಬಾಕಿ ಇರುವ ಡಿ.ಎಸ್.ಎ. (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 (ಶೇ. ಐವತ್ತರಷ್ಟು ಮಾತ್ರ) ರಷ್ಟು ರಿಯಾಯತಿ ನೀಡಿ ನವೆಂಬರ್ 21 ರಿಂದ 2025ರ ಡಿಸೆಂಬರ್ 12ರ ವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಧಪಡಿಸಿಕೊಳ್ಳಲು ಅವಕಾಶ ನೀಡಿದ್ದು, ವಾಹನ ಮಾಲೀಕರುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್