ನ.25 ರಂದು ‘ಸರ್ದಾರ ವಲ್ಲಭಾಯಿ ಪಟೇಲ್@150’ ಏಕತಾ ಪಾದಯಾತ್ರೆ
ಹೊಸಪೇಟೆ, 22 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದಡಿ ಜಿಲ್ಲಾ ಮೇರಾ ಯುವ ಭಾರತ ಸಂಸ್ಥೆ ವತಿಯಿಂದ ಭಾರತದ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರೀಯು ಏಕತೆಯ ಪ್ರತಿಪಾದಕ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ನವೆಂಬರ್.25 ರಂದು
ನ.25 ರಂದು ‘ಸರ್ದಾರ ವಲ್ಲಭಾಯಿ ಪಟೇಲ್@150’ ಏಕತಾ ಪಾದಯಾತ್ರೆ


ಹೊಸಪೇಟೆ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದಡಿ ಜಿಲ್ಲಾ ಮೇರಾ ಯುವ ಭಾರತ ಸಂಸ್ಥೆ ವತಿಯಿಂದ ಭಾರತದ ಉಕ್ಕಿನ ಮನುಷ್ಯ ಮತ್ತು ರಾಷ್ಟ್ರೀಯು ಏಕತೆಯ ಪ್ರತಿಪಾದಕ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ನವೆಂಬರ್.25 ರಂದು ಬೆ.9 ಗಂಟೆಗೆ ಸರ್ದಾರ್@150 ಏಕತಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವು ನಗರದ ವಡಕರಾಯ ದೇವಸ್ಥಾನದಿಂದ ಪ್ರಾರಂಭವಾಗಿ ಪಾದಗಟ್ಟಿ ಆಂಜಿನೇಯ ದೇವಸ್ಥಾನದ ಮೂಲಕ ದೊಡ್ಡ ಮಸೀದಿ, ಗಾಂಧಿಚೌಕ, 3 ಅಂಗಡಿ ಸರ್ಕಲ್, ಪುಣ್ಯಮೂರ್ತಿ ಸರ್ಕಲ್, ಅಶೋಕ ಬುಕ್‍ಸ್ಟಾಲ್ ಸರ್ಕಲ್, ಪುನೀತ್ ರಾಜಕುಮಾರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಖಾಂತರ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾಗುತ್ತದೆ ಎಂದು ಮೇರಾ ಯುವ ಭಾರತ ವಿಜಯನಗರ ಜಿಲ್ಲಾ ಅಧಿಕಾರಿ ಬುಕ್ಕೆ ಸಂಜಯ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande