
ಕಲಬುರಗಿ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಹದಿಹರೆಯದ ಯುವತಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮತ್ತು ಪೂರ್ತಿ ಗುಣವಾಗುವ ಸಾಧ್ಯತೆಯಿರುವ ಅಂಡಾಶಯದ ಜೆರ್ಮ್ ಸೆಲ್ ಗಡ್ಡೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾರಾಯಣ ಹೆಲ್ತ್ ಸಿಟಿ ‘ಭರವಸೆ ಮತ್ತು ಗುಣಪಡಿಸುವಿಕೆ’ ಅಭಿಯಾನವನ್ನು ಆರಂಭಿಸಿದೆ. ಈ ಕುರಿತು ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೈನಕಾಲಜಿಕ್ ಆಂಕೊಲಾಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ರೋಹಿತ್ ರಘುನಾಥ್ ರಾನಡೆ ಅವರು ಯಶಸ್ವಿ ಚಿಕಿತ್ಸೆಯ ಕೆಲವು ನಿಜ ಘಟನೆಗಳನ್ನು ಹಂಚಿಕೊಂಡರು.
ಡಾ. ರೋಹಿತ್ ಅವರು, ಯುವತಿಯರಲ್ಲಿ ಕಾಣುವ ಕೆಲವು ಅಂಡಾಶಯದ ಗಡ್ಡೆಗಳು ಸಂಪೂರ್ಣ ಗುಣವಾಗಬಹುದಾದವು, ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ತಜ್ಞರಿಗೆ ತಲುಪುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಅನೇಕ ಮಹಿಳೆಯರು ನಾರಾಯಣ ಹೆಲ್ತ್ ಸಿಟಿಯಲ್ಲಿ ಶಸ್ತ್ರಚಿಕಿತ್ಸೆ ಮತ್ತು ಆಧುನಿಕ ಕೀಮೋಥೆರಪಿ ಮೂಲಕ ಗುಣಮುಖರಾಗಿದ್ದಾರೆ ಎಂದರು.
ಕಲಬುರಗಿ ಮತ್ತು ರಾಯಚೂರಿನಲ್ಲಿ ಔಟ್‌ರೀಚ್ ಓಪಿಡಿ ಸೇವೆಗಳನ್ನು ನೀಡುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಸುಲಭಗೊಳಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಫುಲ್, ಮಾರುಕಟ್ಟೆ ಮುಖ್ಯಸ್ಥ ವಿಶಾಲ್ ಸಿರ್ಸಿ, ಕನ್ಸಲ್ಟೆಂಟ್ ಗೋಪಾಲ್ ಎ.ಆರ್., ಪ್ರಾಡಕ್ಟ್ ಮ್ಯಾನೇಜರ್ ಭರತ್ ರಮೇಶ್ ಹಾಗೂ ಇತರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa