ನಾಳೆ ಮಕ್ಕಳಿಗೆ ನಿಬಂಧ ಸ್ಪರ್ಧೆ
ವಿಜಯಪುರ, 22 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ನವೆಂಬರ್ 23 ರಂದು ರವಿವಾರ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ. ರವಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಗನ ಮಹಲ ಉದ್ಯಾನದಲ್ಲಿ ಈ ಸ್ಪರ್ಧೆ ನಡೆಯಲ
ನಾಳೆ ಮಕ್ಕಳಿಗೆ ನಿಬಂಧ ಸ್ಪರ್ಧೆ


ವಿಜಯಪುರ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಅಂಗವಾಗಿ ಮಕ್ಕಳಿಗೆ ನವೆಂಬರ್ 23 ರಂದು ರವಿವಾರ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ರವಿವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಗನ ಮಹಲ ಉದ್ಯಾನದಲ್ಲಿ ಈ ಸ್ಪರ್ಧೆ ನಡೆಯಲಿದೆ. ಪ್ರಾಥಮಿಕ, ಹೈಸ್ಕೂಲು ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಮೂರು ಪ್ರತ್ಯೇಕ ವಿಭಾಗಗಳಲ್ಲಿ ನಿಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಬ್ರಿಟಿಷರ ಕಾಲದಿಂದಲೂ ಬರದ ಜಿಲ್ಲೆ ಎಂದು ಹೆಸರಾಗಿದ್ದ ವಿಜಯಪುರದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ನೀರಾವರಿ, ಕೋಟಿ ವೃಕ್ಷ ಆಂದೋಲನದಿಂದ ವಾತಾವರಣದಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು, ದೇಶದಲ್ಲಿ ಶುದ್ಧ ಗಾಳಿಯಲ್ಲಿ ವಿಜಯಪುರ ಮೊದಲ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳು ಪರಿಸರ ಜನಜಾಗೃತಿ ಮುಂತಾದ ಪರಿಸರ ಪೂರಕ ವಿಷಯಗಳ ಕುರಿತು 300 ಶಬ್ದಗಳಿಗೆ ಮೀರದಂತೆ ನಿಬಂಧ ಬರೆಯಬೇಕು.

ನಿಗದಿತ ವಿಭಾಗಗಳಲ್ಲಿ ಪ್ರಥಮ ರೂ. 10000, ದ್ವಿತೀಯ ರೂ. 7000, ತೃತೀಯ ರೂ. 5000 ಹಾಗೂ ಎರಡು ಸಮಾಧಾನ ರೂ. 2500 ನಗದು ಬಹುಮಾನ ನೀಡಲಾಗುವುದು.

ಈ ನಿಬಂಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಒಂದೇ ಅಳತೆಯ ಪೇಪರ್ ಒದಗಿಸಲಾಗುವುದು. ಪೆನ್ನುಗಳನ್ನು ವಿದ್ಯಾರ್ಥಿಗಳು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ಸಂಘಟಕರಾದ ಶಿವು ಕುಂಬಾರ- 9972795289 ಮತ್ತು ರಮೇಶ ಬಿರಾದಾರ- 9972025236 ಸಂಪರ್ಕಿಸಬಹುದಾಗಿದೆ ಎಂದು‌ ಅಮಿತ ಬಿರಾದಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande