ಕಾನಿಪ ಅಭಿವೃದ್ಧಿಗೆ ಒತ್ತು ನೀಡಿ : ಹೋರಾಟಗಾರ ಚನಗೊಂಡ
ವಿಜಯಪುರ, 22 ನವೆಂಬರ್ (ಹಿ.ಸ.) : ವಿಜಯಪುರ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈಗ ಆಯ್ಕೆಯಾಗಿರುವ ಅಧ್ಯಕ್ಷ ಅಶೋಕ ಯಡಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಸೇರಿದಂತೆ ಎಲ್ಲ ಪದಾಧಿಕಾರಿಗಳು ಕ್ರಿಯಾಶೀಲರೂ ಮತ್ತು ಉತ್ಸಾಹಿಗಳೂ ಆಗಿದ್ದು ಸಂಘದಲ್ಲಿ ಇನ್ನು ಅಭಿವೃದ್ಧಿ ಶಕೆ ಆರಂಭವಾಗುವುದ
ಕಾನಿಪ


ವಿಜಯಪುರ, 22 ನವೆಂಬರ್ (ಹಿ.ಸ.) :

ವಿಜಯಪುರ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈಗ ಆಯ್ಕೆಯಾಗಿರುವ ಅಧ್ಯಕ್ಷ ಅಶೋಕ ಯಡಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಸೇರಿದಂತೆ ಎಲ್ಲ ಪದಾಧಿಕಾರಿಗಳು ಕ್ರಿಯಾಶೀಲರೂ ಮತ್ತು ಉತ್ಸಾಹಿಗಳೂ ಆಗಿದ್ದು ಸಂಘದಲ್ಲಿ ಇನ್ನು ಅಭಿವೃದ್ಧಿ ಶಕೆ ಆರಂಭವಾಗುವುದರಲ್ಲಿ ಅನುಮಾನವಿಲ್ಲ ಎಂದು ಖ್ಯಾತ ನ್ಯಾಯವಾದಿ, ರೈತ ಹೋರಾಟಗಾರ ಹಾಗೂ ಕಾನೂನು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದಾನಪ್ಪಗೌಡ ಚನಗೊಂಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕಾನಿಪ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವೃತ್ತಿಯಲ್ಲಿ ವಕೀಲನಾಗಿದ್ದರೂ ಪ್ರವೃತ್ತಿಯಲ್ಲಿ ಪತ್ರಕರ್ತನಾಗಿರುವ ನಾನು ನನ್ನ ’ಕಾನೂನು ವಾಣಿ’ ಪತ್ರಿಕೆ ಮೂಲಕ ಕೆಲ ವರ್ಷಗಳಿಂದ ಕಾನೂನು ಸಂಬಂಧಿ ಬರಹಗಳನ್ನು ಪ್ರಕಟಿಸುತ್ತಿರುವೆ. ತಮ್ಮ ಅಧಿಕಾರಾವಧಿಯಲ್ಲಿ ನನ್ನ ಕಾರ್ಯಕ್ಷೇತ್ರ ಜಿಲ್ಲೆಯ ಸಿಂದಗಿಯಲ್ಲಿ ಪತ್ರಿಕಾ ಭವನ ಸ್ಥಾಪಿಸಬೇಕೆಂದು ಅಲ್ಲಿಯ ಪತ್ರಕರ್ತ ಬಳಗದ ಪರವಾಗಿ ಮನವಿ ಮಾಡಿದರು.

ಕಾನಿಪ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಜಿಲ್ಲೆಯ ಪತ್ರಕರ್ತರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಆತ್ಮೀಯರಾದ ದಾನಪ್ಪಗೌಡ ಚನಗೊಂಡ ಅವರು ಹವ್ಯಾಸಿ ಪತ್ರಕರ್ತರು. ಸಾಮಾಜಿಕ ಹೋರಾಟಗಾರರಾದ ಅವರು ಅನ್ಯಾಯ ಕಂಡಲ್ಲಿ ಸಿಡಿದೇಳುವ ಮನಸ್ಥಿತಿ ಹೊಂದಿದವರು. ಸಿಂದಗಿ ತಾಲ್ಲೂಕಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾದಾಗ ನಮ್ಮೊಂದಿಗೆ ಮುಂಚೂಣಿಯಲ್ಲಿ ನಿಂತು ತಮ್ಮ ವೇದಿಕೆ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿದವರು. ಸದಾ ದೇಸಿ ಉಡುಪಿನಲ್ಲಿ ಕಂಗೊಳಿಸುವ ಅವರು ನಮ್ಮ ದೇಸಿ ಸಂಸ್ಕೃತಿಯ ರಾಯಭಾರಿ ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ನಮ್ಮೆಲ್ಲರಿಗೆ ಮಾಡಿದ ಈ ಸನ್ಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅದನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರದಾಗಿದ್ದು, ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದರು. ‌

ಅಧ್ಯಕ್ಷತೆ ವಹಿಸಿದ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಮಾಧ್ಯಮ ಸ್ನೇಹಿತರಿಂದ ಆಗಬೇಕಿರುವ ಕಾರ್ಯಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದು, ಪ್ರತಿ ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಪಡೆಯುವ ಕುರಿತಂತೆ ಯೋಜನೆ ಹಾಕಿಕೊಳ್ಳುವುದಾಗಿ ಭರವಸೆ ನೀಡಿದರಲ್ಲದೆ, ನ್ಯಾಯವಾದಿ ಚನಗೊಂಡ ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿದರು.

ಸಿಂದಗಿ ತಾಲೂಕು ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಮಾರಲಬಾವಿ ಸ್ವಾಗತಿಸಿದರು. ನ್ಯಾಯವಾದಿ ಶ್ರೀಶೈಲ ಮುಳಜಿ ವಂದಿಸಿದರು.

ಆನಂದ ರಾಠೋಡ (ಡಂಬಳ), ಗುರು ಉಡಗಿ ಸೇರಿದಂತೆ ಹಲವರಿದ್ದರು.

ಕಾನಿಪ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಇದೇ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಜಿಲ್ಲಾ ಉಪಾಧ್ಯಕ್ಷರಾದ ಶಶಿಕಾಂತ ಮೆಂಡೆಗಾರ, ಸಮೀರ ಇನಾಮದಾರ, ಬಸವರಾಜ ಉಳ್ಳಾಗಡ್ಡಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಸದ್ದಾಂ ಜಮಾದಾರ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಚಿದಂಬರ ಬಿ. ಕುಲಕರ್ಣಿ, ಶಂಕರ ಜಲ್ಲಿ, ಗೋಪಾಲ ಕನಿಮಣಿ, ಕಲ್ಲಪ್ಪ ಶಿವಶರಣ ಮತ್ತು ಪವನ ಕುಲಕರ್ಣಿ ಅವರನ್ನು ನ್ಯಾಯವಾದಿ ದಾನಪ್ಪಗೌಡ ಚನಗೊಂಡ ಅವರನ್ನು ಸನ್ಮಾನಿಸಿ ಗೌರವಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande