ಬಾಂಗ್ಲಾದೇಶ ಭೂಕಂಪ ; ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಢಾಕಾ, 22 ನವೆಂಬರ್ (ಹಿ.ಸ.) : ಆ್ಯಂಕರ್ :.ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಗ್ಗಿನ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 10ಕ್ಕೆ ಏರಿದೆ. ಢಾಕಾದಲ್ಲಿ ನಾಲ್ವರು, ನರಸಿಂಗ್ಡಿಯಲ್ಲಿ ಐವರು ಮತ್ತು ನಾರಾಯಣಗಂಜ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸುಮಾರು 200 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸ
Death troll


ಢಾಕಾ, 22 ನವೆಂಬರ್ (ಹಿ.ಸ.) :

ಆ್ಯಂಕರ್ :.ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಗ್ಗಿನ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 10ಕ್ಕೆ ಏರಿದೆ. ಢಾಕಾದಲ್ಲಿ ನಾಲ್ವರು, ನರಸಿಂಗ್ಡಿಯಲ್ಲಿ ಐವರು ಮತ್ತು ನಾರಾಯಣಗಂಜ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸುಮಾರು 200 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ತುರ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾದ ಈ ಭೂಕಂಪದ ಕೇಂದ್ರಬಿಂದು ನರಸಿಂಗ್ಡಿ ಜಿಲ್ಲೆಯ ಮಾಧಬರಿ ಪ್ರದೇಶದಲ್ಲಿತ್ತು. ಭೂಕಂಪದ ತೀವ್ರತೆ ಮಧ್ಯಮವಾದರೂ, ಭೀತಿ, ಕಾಲ್ತುಳಿತ ಮತ್ತು ಕಟ್ಟಡಗಳ ಭಾಗಶಃ ಕುಸಿತದಿಂದ ಹೆಚ್ಚಿನ ಸಾವು-ನೋವು ಸಂಭವಿಸಿದೆ.

ಢಾಕಾದ ಅರ್ಮಾನಿ ಟೋಲಾದಲ್ಲಿ ಕಟ್ಟಡದ ಬಾಗಿಲು ಕುಸಿದು ಮೂವರು ಮೃತಪಟ್ಟಿದ್ದು, ಮುಗ್ಡಾ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಬಿದ್ದು ಭದ್ರತಾ ಸಿಬ್ಬಂದಿ ಒಬ್ಬರು ಸಾವನ್ನಪ್ಪಿದ್ದಾರೆ. ನರಸಿಂಗ್ಡಿಯಲ್ಲೂ ತಂದೆ-ಮಗ ಸೇರಿ ಐವರು ಮೃತಪಟ್ಟಿದ್ದಾರೆ. ನಾರಾಯಣಗಂಜ್‌ನಲ್ಲಿ ಗೋಡೆ ಕುಸಿದು 10 ತಿಂಗಳ ಬಾಲಕಿ ಮೃತಳಾಗಿದ್ದಾಳೆ.

ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿದ್ದು, ಸಾರ್ವಜನಿಕರಿಗೆ ತುರ್ತು ಸಹಾಯಕ್ಕಾಗಿ 0258811651 ಸಂಖ್ಯೆಗೆ ಕರೆ ಮಾಡಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande