
ನವದೆಹಲಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಡಿಸೆಂಬರ್‌ನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ವೆಸ್ಟ್ ಇಂಡೀಸ್ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಹಿರಿಯ ವೇಗಿ ಕೆಮರ್ ರೋಚ್ ಹಾಗೂ ಆಲ್‌ರೌಂಡರ್ ಕವೇಮ್ ಹಾಡ್ಜ್ ತಂಡಕ್ಕೆ ಮರಳಿದ್ದಾರೆ.
ಅನನುಭವಿಗಳಿಂದ ಕೂಡಿದ ವೇಗದ ಬಾಲಿಂಗ್ ದಾಳಿಗೆ ರೋಚ್ ಸೇರಿಕೆ ಬಲ ನೀಡುವ ಸಾಧ್ಯತೆ ಇದೆ. ಇದೇ ವೇಳೆ 29 ವರ್ಷದ ಒಜೆ ಶೀಲ್ಡ್ಸ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುತ್ತಿದ್ದು, ವೇಗದ ಬೌಲರ್‌ಗಳಾದ ಶಮರ್ ಜೋಸೆಫ್ ಮತ್ತು ಅಲ್ಜಾರಿ ಜೋಸೆಫ್ ಗಾಯದ ಕಾರಣ ಪ್ರವಾಸದಿಂದ ಹೊರಗುಳಿದಿದ್ದಾರೆ. ಎಡಗೈ ಸ್ಪಿನ್ನರ್ ಖಾರಿ ಪಿಯರೆ ಅವರನ್ನು ಕೈಬಿಡಲಾಗಿದ್ದು, ಕವೇಮ್ ಹಾಡ್ಜ್‌ಗೆ ಎರಡನೇ ಅವಕಾಶ ದೊರಕಿದೆ.
“ನ್ಯೂಜಿಲೆಂಡ್ ಯಾವಾಗಲೂ ಯಾವುದೇ ತಂಡಕ್ಕೆ ಕಠಿಣ ಸ್ಥಳ. ಇತ್ತೀಚೆಗಿನ ಆಂಟಿಗುವಾದ ಶಿಬಿರವನ್ನು ನ್ಯೂಜಿಲೆಂಡ್‌ನ ವೇಗ ಸ್ನೇಹಿ ಪಿಚ್‌ಗಳಿಗೆ ತಕ್ಕಂತೆ ರೂಪಿಸಲಾಗಿತ್ತು” ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ನಿರ್ದೇಶಕ ಮೈಲ್ಸ್ ಬಾಸ್ಕೊಂಬ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa