ರಕ್ತಚಂದನ ಸಂರಕ್ಷಣೆಗಾಗಿ ಆಂಧ್ರ ಪ್ರದೇಶಕ್ಕೆ ₹39.84 ಕೋಟಿ ಬಿಡುಗಡೆ
ನವದೆಹಲಿ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಅಪರೂಪದ ರಕ್ತಚಂದನ ಸಂರಕ್ಷಣೆ ಮತ್ತು ರಕ್ಷಣೆಗೆ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಆಂಧ್ರ ಪ್ರದೇಶಕ್ಕೆ ₹39.84 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅರಣ್ಯ ಇಲಾಖೆಗೆ in ₹38.36 ಕೋಟಿ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿಗೆ ₹1.48 ಕೋಟಿ ಸೇರಿದೆ.
blood sandalwood


ನವದೆಹಲಿ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಅಪರೂಪದ ರಕ್ತಚಂದನ ಸಂರಕ್ಷಣೆ ಮತ್ತು ರಕ್ಷಣೆಗೆ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು ಆಂಧ್ರ ಪ್ರದೇಶಕ್ಕೆ ₹39.84 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅರಣ್ಯ ಇಲಾಖೆಗೆ in ₹38.36 ಕೋಟಿ ಮತ್ತು ರಾಜ್ಯ ಜೀವವೈವಿಧ್ಯ ಮಂಡಳಿಗೆ ₹1.48 ಕೋಟಿ ಸೇರಿದೆ.

ಈ ಮೂಲಕ ಪ್ರವೇಶ–ಪ್ರಯೋಜನ ಹಂಚಿಕೆ ಅಡಿಯಲ್ಲಿ ದೇಶದ ಒಟ್ಟು ವಿತರಣೆ ₹110 ಕೋಟಿ ತಲುಪಿದ್ದು, ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಕೇಂದ್ರ ಪರಿಸರ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಗಾಢ ಕೆಂಪು ಮರಕ್ಕೆ ಪ್ರಸಿದ್ಧವಾದ ಕೆಂಪು ರಕ್ತಚಂದನವು ಆಂಧ್ರ ಪ್ರದೇಶದ ಪೂರ್ವ ಘಟ್ಟಗಳ ಆಯ್ದ ಪ್ರದೇಶಗಳಲ್ಲಿ — ಅನಂತಪುರ, ಚಿತ್ತೂರು, ಕಡಪ, ಪ್ರಕಾಶಂ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಮಾತ್ರ ನೈಸರ್ಗಿಕವಾಗಿ ಬೆಳೆಯುತ್ತದೆ. ಹರಾಜಾದ ಅಥವಾ ಮುಟ್ಟುಗೋಲು ಹಾಕಿಕೊಂಡ ಮರಗಳ ನಿಯಂತ್ರಿತ ಮಾರಾಟದಿಂದ ಅರಣ್ಯ ಇಲಾಖೆಗೆ ₹87.68 ಕೋಟಿ ಆದಾಯ ಬಂದಿತ್ತು.

ಇದುವರೆಗೆ ಆಂಧ್ರ ಪ್ರದೇಶ, ಕರ್ನಾಟಕ, ಒಡಿಶಾ ರಾಜ್ಯಗಳ ಅರಣ್ಯ ಇಲಾಖೆಗಳಿಗೆ ಮತ್ತು ಆಂಧ್ರ ರಾಜ್ಯ ಜೀವವೈವಿಧ್ಯ ಮಂಡಳಿಗೆ ಒಟ್ಟು ₹49 ಕೋಟಿಗೂ ಹೆಚ್ಚು ನೆರವನ್ನು ನೀಡಲಾಗಿದೆ. ಜೊತೆಗೆ, ಆಂಧ್ರದ 198 ರೈತರಿಗೆ ₹3 ಕೋಟಿ, ತಮಿಳುನಾಡಿನ 18 ರೈತರಿಗೆ ₹55 ಲಕ್ಷ ವಿತರಿಸಲಾಗಿದೆ.

ಈ ಬಾರಿ ಬಿಡುಗಡೆಯಾದ ನಿಧಿ ಅರಣ್ಯ ಇಲಾಖೆಗೆ ಸಾಮರ್ಥ್ಯ ನಿರ್ಮಾಣ, ರಕ್ಷಣಾ ಕ್ರಮಗಳ ಬಲಪಡಿಕೆ, ವೈಜ್ಞಾನಿಕ ನಿರ್ವಹಣೆ, ಜೀವವೈವಿಧ್ಯ ಸಮಿತಿಗಳ ಮೂಲಕ ಉದ್ಯೋಗ ಸೃಷ್ಟಿ ಮತ್ತು ದೀರ್ಘಕಾಲೀನ ಮೇಲ್ವಿಚಾರಣೆಗೆ ನೆರವಾಗಲಿದೆ. ಆಂಧ್ರ ಜೀವವೈವಿಧ್ಯ ಮಂಡಳಿಯು 1 ಲಕ್ಷ ಕೆಂಪು ರಕ್ತಚಂದನ ಸಸಿ ಉತ್ಪಾದನೆಯ ಯೋಜನೆಗೆ ₹2 ಕೋಟಿ ಮಂಜೂರಿಯೂ ಪಡೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande