ನೇಪಾಳ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ
ಕಠ್ಮಂಡು, 20 ನವೆಂಬರ್ (ಹಿ.ಸ.) : ಆ್ಯಂಕರ್ : ಮುಂದಿನ ನೇಪಾಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ನೇಪಾಳ ಚುನಾವಣಾ ಆಯೋಗವು ಹೊಸ ಕ್ರಮಗಳನ್ನು ಕೈಗೊಂಡಿದೆ. ಫೇಸ್‌ಬುಕ್, ಯೂಟ್ಯೂಬ್, ಟಿಕ್‌ಟಾಕ್ ಮತ್ತು ಎಕ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭ್ಯರ್ಥಿಗಳು
EC nepal


ಕಠ್ಮಂಡು, 20 ನವೆಂಬರ್ (ಹಿ.ಸ.) :

ಆ್ಯಂಕರ್ : ಮುಂದಿನ ನೇಪಾಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಯಲು ನೇಪಾಳ ಚುನಾವಣಾ ಆಯೋಗವು ಹೊಸ ಕ್ರಮಗಳನ್ನು ಕೈಗೊಂಡಿದೆ.

ಫೇಸ್‌ಬುಕ್, ಯೂಟ್ಯೂಬ್, ಟಿಕ್‌ಟಾಕ್ ಮತ್ತು ಎಕ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ನಾಯಕರ ವಿರುದ್ಧ ಕಾಣಿಸಿಕೊಂಡಿರುವ ನಿಂದನೀಯ, ಅವಹೇಳನಕಾರಿ ಮತ್ತು ದ್ವೇಷಪೂರ್ಣ ಅಭಿಪ್ರಾಯ ಹೆಚ್ಚಳದ ಬಗ್ಗೆ ಆಯೋಗ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಕರಡು ನೀತಿ ಸಂಹಿತೆಯಲ್ಲಿ ಈ ಕುರಿತು ವಿಶೇಷ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ನೀತಿಗಳು ಜಾರಿಗೆ ಬಂದರೆ ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುವ ನಿಂದನೆ, ಮಾನಹಾನಿ ಮತ್ತು ಚುನಾವಣಾ ಪ್ರಭಾವ ಬೀರಲಿಚ್ಚಿಸುವ ವಿಷಯಗಳ ಮೇಲೆ ನಿಗ್ರಹ ಹೇರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯೋಗದ ವಕ್ತಾರ ನಾರಾಯಣ್ ಭಟ್ಟರಾಯ್ ಅವರು, ಈಗಾಗ್ಲೇ ಅಸ್ತಿತ್ವದಲ್ಲಿರುವ ನಿಯಮಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಹೊಸ ಕರಡಿನಲ್ಲಿ ಸ್ಪಷ್ಟ ನಿಷೇಧಗಳನ್ನು ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕ್ರಮಗಳು ಅಭ್ಯರ್ಥಿಗಳಿಗೆ ಅನಿರೀಕ್ಷಿತ ಮಾನಹಾನಿ ಮತ್ತು ತಪ್ಪು ಪ್ರಚಾರದಿಂದ ರಕ್ಷಣೆ ನೀಡುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ವಿಶ್ವಾಸ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande