
ಪಾಟ್ನಾ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ನಿತೀಶ್ ಕುಮಾರ್ ೧೦ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿ ಉಪಸ್ಥಿತರಿದ್ದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನಿತೀಶ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಬಿಜೆಪಿ ವತಿಯಿಂದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸಹ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಜಮುಯಿಯಿಂದ ಗೆದ್ದ ಶ್ರೇಯಸಿ ಸಿಂಗ್ ಮತ್ತು ಅರೈ ಕ್ಷೇತ್ರದ ರಾಮ ನಿಶಾದ್ ಮೊದಲ ಬಾರಿಗೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ.
ನೂತನ ಸಂಪುಟದಲ್ಲಿ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ, ವಿಜಯ್ ಚೌಧರಿ, ಮಂಗಲ್ ಪಾಂಡೆ, ಅಶೋಕ್ ಚೌಧರಿ, ನಿತಿನ್ ನವೀನ್, ಲೆಸಿ ಸಿಂಗ್, ರಾಮ ನಿಶಾದ್, ಶ್ರೇಯಸಿ ಸಿಂಗ್ ಸೇರಿದಂತೆ ಅನುಭವಿ ಹಾಗೂ ಯುವ ಮುಖಗಳಿಗೆ ಸ್ಥಾನ ನೀಡಲಾಗಿದೆ.
ಸಂಪುಟದಲ್ಲಿ ದಲಿತ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಮರ್ಪಕ ಪ್ರತಿನಿಧಿತ್ವ ನೀಡಲಾಗಿದೆ. ಶ್ರೇಯಸಿ ಸಿಂಗ್, ಲೆಸಿ ಸಿಂಗ್ ಮತ್ತಿತರ ಮಹಿಳಾ ಸದಸ್ಯರ ಸೇರ್ಪಡೆ ಮಹಿಳಾ ಸಬಲೀಕರಣದ ಸಂದೇಶ ನೀಡಿದೆ. ಅಲ್ಪಸಂಖ್ಯಾತ ಮುಖಗಳನ್ನೂ ಸೇರಿಸುವ ಮೂಲಕ ಸಾಮಾಜಿಕ ಸಮತೋಲನ ಕಾಪಾಡುವ ಪ್ರಯತ್ನ ಗೋಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa