
ನವದೆಹಲಿ, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಬೊಲೊಗ್ನಾದಲ್ಲಿ ನಡೆದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿ ಆಸ್ಟ್ರಿಯಾವನ್ನು 2-1 ಅಂತರದಲ್ಲಿ ಸೋಲಿಸಿ 2025 ರ ಸೆಮಿಫೈನಲ್ ಪ್ರವೇಶಿಸಿದೆ. ಜಾನಿಕ್ ಸಿನ್ನರ್ ಮತ್ತು ಮುಸೆಟ್ಟಿ ಗೈರುಹಾಜರಿರುವ ನಡುವೆಯೂ ಮ್ಯಾಟಿಯೊ ಬೆರೆಟ್ಟಿನಿ ಮತ್ತು ಫ್ಲೇವಿಯೊ ಕೊಬೊಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಇಟಲಿಗೆ ಜಯ ತಂದುಕೊಟ್ಟರು.
ಬೆರೆಟ್ಟಿನಿ ಜುರಿಜ್ ರೋಡಿಯೊನೊವ್ ವಿರುದ್ಧ 6-3, 7-6ರಿಂದ ಗೆದ್ದು ತಂಡಕ್ಕೆ ಮುನ್ನಡೆ ನೀಡಿದರು. ಬಳಿಕ ಕೊಬೊಲ್ಲಿ ಫಿಲಿಪ್ ಮಿಸೋಲಿಕ್‌ನನ್ನು 6-1, 6-3ರಿಂದ ಸುಲಭವಾಗಿ ಮಣಿಸಿದರು. ಡಬಲ್ಸ್‌ನಲ್ಲಿ ಇಟಲಿ ಸೋಲಾದರೂ, ಈಗಾಗಲೇ ಸಿಂಗಲ್ಸ್ ಮೂಲಕ ಜಯ ಖಚಿತಪಡಿಸಿತ್ತು.
ಸೆಮಿಫೈನಲ್‌ನಲ್ಲಿ ಇಟಲಿ ಬೆಲ್ಜಿಯಂ ವಿರುದ್ಧ ಕಣಕ್ಕಿಳಿಯಲಿದೆ. ಇತರ ಕ್ವಾರ್ಟರ್‌ಗಳಲ್ಲಿ ಅರ್ಜೆಂಟೀನಾ–ಜರ್ಮನಿ ಮತ್ತು ಸ್ಪೇನ್–ಜೆಕ್ ಗಣರಾಜ್ಯ ನಡುವೆ ಸೆಣಸಾಟ ಮುಂದುವರಿಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa