ಸೌದಿ ಅರೇಬಿಯಾ ಅಮೇರಿಕದ ಪ್ರಮುಖ ಮಿತ್ರ ರಾಷ್ಟ್ರ : ಟ್ರಂಪ್
ವಾಷಿಂಗ್ಟನ್, 19 ನವೆಂಬರ್ (ಹಿ.ಸ.) : ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾವನ್ನು ‘ನ್ಯಾಟೋ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರ’ವೆಂದು ಘೋಷಿಸಿದರು. ಶ್ವೇತಭವನದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಗೌರವಾರ್ಥ ನಡೆದ ಭೋಜನ ಕೂಟದಲ್ಲಿ ಈ ಘೋಷಣೆ ನಡೆಯಿತು.
Trump


ವಾಷಿಂಗ್ಟನ್, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೇಬಿಯಾವನ್ನು ‘ನ್ಯಾಟೋ ಅಲ್ಲದ ಪ್ರಮುಖ ಮಿತ್ರ ರಾಷ್ಟ್ರ’ವೆಂದು ಘೋಷಿಸಿದರು.

ಶ್ವೇತಭವನದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಗೌರವಾರ್ಥ ನಡೆದ ಭೋಜನ ಕೂಟದಲ್ಲಿ ಈ ಘೋಷಣೆ ನಡೆಯಿತು. ಈ ಮೂಲಕ ಅಮೆರಿಕಾ–ಸೌದಿ ಮಿಲಿಟರಿ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ.

ಟ್ರಂಪ್, ಸೌದಿ ಅರೇಬಿಯಾದ ಎಫ್-35 ಯುದ್ಧ ವಿಮಾನ ಖರೀದಿ ಸೇರಿದಂತೆ ಹಲವು ಐತಿಹಾಸಿಕ ಒಪ್ಪಂದಗಳು ಅಂತಿಮಗೊಂಡಿರುವುದನ್ನು ತಿಳಿಸಿದ್ದಾರೆ. ಸಮಾರಂಭದಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಎಲೋನ್ ಮಸ್ಕ್, ಟಿಮ್ ಕುಕ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande