
ವೆಲ್ಲಿಂಗ್ಟನ್, 18 ನವೆಂಬರ್ (ಹಿ.ಸ.) :
ಆ್ಯಂಕರ್ : ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ನ್ಯೂಜಿಲೆಂಡ್‌ನ ಪ್ರಮುಖ ಆಲ್‌ರೌಂಡರ್ ಡ್ಯಾರಿಲ್ ಮಿಚೆಲ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಈಗಾಗಲೇ ಎರಡನೇ ಏಕದಿನಕ್ಕೆ ಸೇರಿಸಲ್ಪಟ್ಟಿದ್ದ ಹೆನ್ರಿ ನಿಕೋಲ್ಸ್ ಇಡೀ ಸರಣಿಗೆ ತಂಡದೊಂದಿಗೆ ಮುಂದುವರಿಯಲಿದ್ದಾರೆ.
ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶತಕ ಬಾರಿಸುವ ವೇಳೆ ತೊಡೆ ಸಂದು ಗಾಯಗೊಂಡ ಮಿಚೆಲ್, ಬಳಿಕ ಫೀಲ್ಡಿಂಗ್‌ಗೆ ಮರಳಲಾಗಲಿಲ್ಲ, ವೈದ್ಯರು ಅವರಿಗೆ ಎರಡು ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ.
ಮುಖ್ಯ ತರಬೇತುದಾರ ರಾಬ್ ವಾಲ್ಟರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಡ್ಯಾರಿಲ್ ಉತ್ತಮ ಫಾರ್ಮ್‌ನಲ್ಲಿದ್ದಾಗಲೇ ಗಾಯದ ಕಾರಣದಿಂದ ಹೊರಗುಳಿಯುವುದು ತಂಡಕ್ಕೆ ಹಿನ್ನಡೆಯಾಗಿದೆ. ಆದರೆ ಡಿಸೆಂಬರ್ 2ರಿಂದ ಆರಂಭವಾಗುವ ಟೆಸ್ಟ್ ಸರಣಿಗೆ ಅವರು ಲಭ್ಯರಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa