
ಬೆಂಗಳೂರು, 18 ನವೆಂಬರ್ (ಹಿ.ಸ.) :
ಆ್ಯಂಕರ್ : ʼಸ್ವಚ್ಛ ಮತ್ತು ಸುಸ್ಥಿರ ದೆಹಲಿʼ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭೂತಪೂರ್ವ ಹೆಜ್ಜೆಯಿರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ಹೆದ್ದಾರಿಗಳ ಬಳಿ ʼಸೌರ ವಿದ್ಯುತ್ ಸ್ಥಾವರʼ ಸ್ಥಾಪಿಸುವ ಮಹತ್ತರ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
2070ರ ವೇಳೆಗೆ ಪ್ರಧಾನಿ ಮೋದಿ ಅವರ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಕಲ್ಪನೆಗೆ ಅನುಗುಣವಾಗಿ ಸೌರಶಕ್ತಿ ನಿಗಮ ಲಿಮಿಟೆಡ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೆಹಲಿಯಲ್ಲಿ ಸ್ವಚ್ಛ-ಸುಸ್ಥಿರ ಮೂಲಸೌಕರ್ಯಕ್ಕೆ ಒತ್ತು ನೀಡುವಲ್ಲಿ ಒಂದು ಹೆಜ್ಜೆ ಮುಂದಿದೆ.
ದೆಹಲಿಯ ಸಹರಾನ್‌ಪುರ ಡೆಹ್ರಾಡೂನ್ ಹೆದ್ದಾರಿ ಪ್ಯಾಕೇಜ್ 1ರ ಎತ್ತರದ ಭಾಗದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಎಸ್‌ಇಸಿಐ ಮತ್ತು ಎನ್‌ಎಚ್‌ಎಐ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೆಹಲಿಯಲ್ಲಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯ ತಡೆಗಟ್ಟುವಂತಹ ಅನನ್ಯ ಕ್ರಮ ಕೈಗೊಂಡಿರುವುದು ʼಸ್ವಚ್ಛ ಮತ್ತು ಸುಸ್ಥಿರ ದೆಹಲಿʼ ನಿರ್ಮಾಣದತ್ತ ಕೇಂದ್ರ ಸರ್ಕಾರ ಇರಿಸಿದ ಮಹತ್ವಾಕಾಂಕ್ಷಿ ಹೆಜ್ಜೆಗೆ ನಿದರ್ಶನ.
ಹೆದ್ದಾರಿಗಳ ಬಳಿ ಸೌರ ಸ್ಥಾವರ ಸ್ಥಾಪನೆ ʼ2070ರ ವೇಳೆಗೆ ಭಾರತವನ್ನು ನಿವ್ವಳ ಶೂನ್ಯವನ್ನಾಗಿಸುವ ಹಾಗೂ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ದೃಷ್ಟಿಕೋನʼಕ್ಕೆ ಇಂಬು ನೀಡುವಂತಿದೆ.
ಸೌರಶಕ್ತಿ ನಿಗಮ ಲಿಮಿಟೆಡ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೆಹಲಿ ಸಹರಾನ್‌ಪುರ ಡೆಹ್ರಾಡೂನ್ ಹೆದ್ದಾರಿಯ ಪ್ಯಾಕೇಜ್-1 (ದೆಹಲಿ ಭಾಗ) ಎತ್ತರದ ಭಾಗದಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿವೆ.
ಹೆದ್ದಾರಿ ಮೂಲಸೌಕರ್ಯದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು, ಹೆದ್ದಾರಿ ಮೂಲ ಸೌಕರ್ಯಕ್ಕೆ ಶಕ್ತಿ ತುಂಬಲು ಮತ್ತು ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ಸೌರಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಈ ಒಪ್ಪಂದದ ಗುರಿಯಾಗಿದೆ. ಇದರಿಂದ ಶುದ್ಧ ಶಕ್ತಿ ಉತ್ಪಾದನೆ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಮಾದರಿಯಾಗಿದೆ.
ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜಿಸುವ ಸರ್ಕಾರದ ಬದ್ಧತೆಗೆ ಇದು ಸಾಕ್ಷಿಯಾಗಿದ್ದು, SECI ಮತ್ತು NHAI ನಡುವಿನ ಪಾಲುದಾರಿಕೆ ಹೆದ್ದಾರಿ ಮೂಲಸೌಕರ್ಯಕ್ಕಾಗಿ ನವೀನ ಮತ್ತು ಪರಿಸರ ಸ್ನೇಹಿ ಪರಿಹಾರಗಳಿಗೆ ದಾರಿ ಮಾಡಿಕೊಡುತ್ತದೆ.
ಸೌರಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡುತ್ತದೆ. ಹೆದ್ದಾರಿ ಬಳಿ ಸೌರ ಸ್ಥಾವರ ಸ್ಥಾಪಿಸುವ ಈ ಯೋಜನೆ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ನವೀಕರಿಸಬಹುದಾದ ಶಕ್ತಿಯನ್ನು ಸಂಯೋಜಿಸುವ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸುತ್ತದೆ. ಇದು ಭವಿಷ್ಯದ ಯೋಜನೆಗಳಿಗೆ ಒಂದು ನವೀನ ಮಾದರಿ ಎನಿಸಿದೆ.
ನವೀಕರಿಸಬಹುದಾದ ಇಂಧನ ಉತ್ತೇಜಿಸುವ ಮತ್ತು ಇಂಗಾಲದ ಹೆಜ್ಜೆ ಗುರುತು ಕ್ಷೀಣಿಸುವ ಸರ್ಕಾರದ ದೃಷ್ಟಿಕೋನಕ್ಕೆ ಅನುಗುಣವಾಗಿ SECI ಮತ್ತು NHAI ಸುಸ್ಥಿರ ಭವಿಷ್ಯದತ್ತ ಪರಸ್ಪರ ಬದ್ಧತೆ ಪ್ರದರ್ಶಿಸಿದ್ದು ಇದೀಗ ದೆಹಲಿ ಭಾಗದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತಾರೆ MoRTH ಕಾರ್ಯದರ್ಶಿ ವಿ.ಉಮಾಶಂಕರ್ ಮತ್ತು SECI ಲಿಮಿಟೆಡ್ ನಿರ್ದೇಶಕ ಸಂಜಯ್ ಶರ್ಮಾ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa