
ಢಾಕಾ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ನ್ಯಾಯಮಂಡಳಿ-1 ಇಂದು ತೀರ್ಪು ನೀಡಲಿದೆ. ನ್ಯಾಯಮೂರ್ತಿ ಗೋಲಮ್ ಮುರ್ತುಜಾ ಮಜುಂದಾರ್ ನೇತೃತ್ವದ ಟ್ರಿಬ್ಯೂನಲ್ ತೀರ್ಪು ನೀಡಲಿದೆ.
ಕಳೆದ ವರ್ಷದ ಸರ್ಕಾರವಿರೋಧಿ ಹಿಂಸಾಚಾರದಲ್ಲಿ 1,400 ಕ್ಕೂ ಹೆಚ್ಚು ಮಂದಿ ಸಾವಿಗೀಡಾದ ಹಿನ್ನೆಲೆಯಲ್ಲಿ, ಮುಖ್ಯ ಪ್ರಾಸಿಕ್ಯೂಟರ್ ಹಸೀನಾಗೆ ಮರಣದಂಡನೆಗೆ ಆಗ್ರಹಿಸಿದ್ದಾರೆ.
ತೀರ್ಪಿನ ಮುನ್ನ ಢಾಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೇನೆ, ಗಡಿ ಕಾವಲು ಪಡೆ ಮತ್ತು ಪೊಲೀಸರನ್ನು ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ.
ಈ ಪ್ರಕರಣದಲ್ಲಿ ಹಸೀನಾ, ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥ ಅಬ್ದುಲ್ಲಾ ಅಲ್-ಮಾಮುನ್ ಆರೋಪಿಗಳಾಗಿದ್ದಾರೆ. ಹಸೀನಾ ಹಾಗೂ ಕಮಲ್ ಪರಾರಿಯಾಗಿದ್ದು, ಮಾಮುನ್ ಸರ್ಕಾರಿ ಸಾಕ್ಷಿಯಾಗಿದ್ದಾರೆ.
ತೀರ್ಪಿನ ಪ್ರಮುಖ ಭಾಗಗಳನ್ನು ಬಾಂಗ್ಲಾದೇಶ ದೂರದರ್ಶನ ನೇರ ಪ್ರಸಾರ ಮಾಡುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa