ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ ಕಾರ್ಯಕ್ರಮ
ಗದಗ, 17 ನವೆಂಬರ್ (ಹಿ.ಸ.) ಆ್ಯಂಕರ್:- ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ, ಕೆ.ಎಂ.ಎಫ್ ಧಾರವಾಡ, ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಡರಕಟ್ಟಿ ಹಾಗೂ ಶಿರಹಟ್
ಫೋಟೋ


ಗದಗ, 17 ನವೆಂಬರ್ (ಹಿ.ಸ.)

ಆ್ಯಂಕರ್:- ಸಹಕಾರ ಇಲಾಖೆ, ಗದಗ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ, ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ, ಕೆ.ಎಂ.ಎಫ್ ಧಾರವಾಡ, ಗದಗ ಉಪವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಡರಕಟ್ಟಿ ಹಾಗೂ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಎಲ್ಲಾ ಸಹಕಾರ ಸಂಘ, ಬ್ಯಾಂಕುಗಳ ಸಂಯುಕ್ತ ಆಶ್ರಯದಲ್ಲಿ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ರಾಷ್ಟೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾರತದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿೆ” ದಿನದ ಕಾರ್ಯಕ್ರಮವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಡರಕಟ್ಟಿ ಇದರ ಸಹಕಾರ ಸಭಾಭವನದಲ್ಲಿ ನೆರವೇರಿಸಲ್ಪಟ್ಟಿತು.

ಕಾರ್ಯಕ್ರಮವನ್ನು ಜರುಗಿಸುವ ಪೂರ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧರ್ಮಣ್ಣ ಮಹಾದೇವಪ್ಪ ಸಿದ್ದಾಪೂರವರು ಅಕಾಲಿಕ ಮರಣ ಹೊಂದಿದ ಸುದ್ದಿ ತಿಳಿದು ಸಭೆಯಲ್ಲಿ ಶೋಕ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಕಾರ್ಯಕ್ರಮ ಮುಂದುವರೆಸಲಾಯಿತು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿಯವರು ಮಾತನಾಡುತ್ತಾ ಇಂದು ಅಕಾಲಿಕ ಮರಣ ಹೊಂದಿದ ಸದರಿ ಸಂಘದ ನಿರ್ದೇಶಕರಾದ ಧರ್ಮಣ್ಣ ಸಿದ್ದಾಪೂರ ಅವರ ಅವಧಿಯಲ್ಲಿ ಸಂಘವು ಪ್ರಗತಿ ಸಾಧಿಸಿದ ಬಗ್ಗೆ ಮತ್ತು ಕಾಲಕಾಲಕ್ಕೆ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ನೀಡಿದ ಸಲಹೆ ಮತ್ತು ಮಾರ್ಗದರ್ಶನ ಕುರಿತು ಶ್ಲಾಘಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಮುಂದುವರೆದು ಗ್ರಾಮಿಣ ಉದ್ಯೋಗಕ್ಕೆ ಉತ್ತೇಜನ ನೀಡಿ, ವಿಶೇಷವಾಗಿ ರೈತರು, ಮಹಿಳೆಯರು, ಯುವಕರು, ಮತ್ತು ಸಣ್ಣ ಉದುಮಿಗಳಿಗೆ ದೊಡ್ಡ ಪ್ರಮಾಣದ ಉದ್ಯೊಗಾವಕಾಶಗಳನ್ನು ಸೃಷ್ಠಿಸುವುದು. “ವಿಕಸಿತ ಭಾರತ 2047” ಕ್ಕೆ ಕೊಡುಗೆ ನೀಡಿ, ಅಭಿವೃಧ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೃಷ್ಠಿಕೋನಕ್ಕೆ ಅನಕುಲವಾಗುವಂತೆ ಸದರಿ ಸಹಕಾರ ಸಂಘವು ತನ್ನ ಕೊಡುಗೆಯನ್ನು ನೀಡುತ್ತಿದೆ. ಮತ್ತು ಸಂಘದ ಲಾಭದಲ್ಲಿ 3 ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಆಧ್ಯತೆ ನೀಡಿ ತನ್ನ ಸಂಘದ ಸದಸ್ಯರಿಗೆ ಕೃಷಿಯಲ್ಲಿ ಸಾಧಿಸಿದ ಸಾಧಕರನ್ನು ಕರೆಯಿಸಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವಲ್ಲಿ ಮಾರ್ಗದರ್ಶನ ನೀಡುತ್ತಿರುವುದು. ಉಳಿದ ಸಂಘಗಳಿಗೆ ಮಾದರಿಯಾಗಿದೆ. ಎಂದು ಹೇಳಿದರು.

ಕೆ.ಸಿ.ಸಿ. ಬ್ಯಾಂಕ್ ಲಿ., ಧಾರವಾಡ ಇದರ ನಿರ್ದೇಶಕರಾದ ಜಿ. ವ್ಹಿ. ಪಾಟೀಲ ಮಾತನಾಡುತ್ತಾ ಈ ಸಂಘದ ಆಡಳಿತ ಮಂಡಳಿ ಸದಸ್ಯರು ಕ್ರಿಯಾಶೀಲರಾಗಿದ್ದು, ಕಾನೂನಾತ್ಮಕವಾಗಿ ಸಾಮಾಜಿಕವಾಗಿ ತನ್ನ ಸಂಘದ ಸದಸ್ಯರುಗಳಿಗೆ ತನ್ನ ಉಪವಿಧಿಗಳಲ್ಲಿ ಅಳವಡಿಸಿರುವ ಉದ್ದೇಶಗಳಿಗಣುಗುಣವಾಗಿ ಸೇವೆಯನ್ನು ನೀಡುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ ಕೆ.ಸಿ.ಸಿ. ಬ್ಯಾಂಕಿನಿಂದ ಸಿಗುವ ಆರ್ಥಿಕ ಸೌಲಭ್ಯಗಳನ್ನು ಹಾಗೂ ಇನ್ನಿತರ ಅನುಕೂಲತೆಗಳನ್ನು ತಮ್ಮ ಹಾಗೂ ಎರಡು ತಾಲೂಕುಗಳ ಸಂಘಗಳಿಗೆ ಒದಗಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸೋಮೇಶ್ವರ ಸಹಕಾರಿ ನೂಲಿನ ಗಿರಣಿ ನಿ., ಲಕ್ಷ್ಮೇಶ್ವರ ಇದರ ಅಧ್ಯಕ್ಷರಾದ ಪುಲಕೇಶಿ ಜಿ. ಉಪನಾಳ ಮಾತನಾಡುತ್ತಾ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ಚಟುವಟಿಕೆಗಳಿಗೆ ಸಹಕಾರ ವಲಯವೇ ಮೂಲಾಧಾರವಾಗಿದೆ. ಗ್ರಾಮೀಣ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಹಕಾರ ಕ್ಷೇತ್ರದ ಬೆಳವಣಿಗೆಯನ್ನು ಆಧಾರವಾಗಿಸಿಕೊಂಡು ಕೇಂದ್ರ ಸರ್ಕಾರವು “ರಾಷ್ಟ್ರೀಯ ಸಹಕಾರಿ ನೀತಿ 2025”ನ್ನು ಅನಾವರಣಗೊಳಿಸಿದೆ. ಸಹಕಾರಿ ನೀತಿ ಪರಿಚಯದೊಂದಿಗೆ ಕೇಂದ್ರ ಸರ್ಕಾರ ಸಹಕಾರ ವಲಯದಲ್ಲಿ ಅಮೂಲಾಗ್ರ ಪರಿವರ್ತನೆಗೂ ಸಜ್ಜಾಗಿದೆ. ರಾಷ್ಟçದಾದ್ಯಂತ ಸಹಕಾರಿ ಸಂಘ ಸಂಸ್ಥೆಗಳನ್ನು ಆಧುನಿಕರಿಸಲು ವೃತ್ತಿಪರಗೊಳಿಸಲು ಮತ್ತು ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.

ಅಡರಕಟ್ಟಿ ಗ್ರಾಮದ ಹಿರಿಯ ಸಹಕಾರಿಗಳಾದ ಚನ್ನಬಸಪ್ಪ ಹಾದಿಮನಿ ಮಾತನಾಡುತ್ತಾ ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ ಯಾವುದೇ ವ್ಯವಸ್ಥೆಯಾದರು ಸಹ ತಂತ್ರಜ್ಞಾನ, ಅನ್ವೇಷಣೆ ಹಾಗೂ ಉತ್ತಮ ಆಡಳಿತಕ್ಕೆ ಒತ್ತು ನೀಡಬೇಕಾದುದು ಅಗತ್ಯವು, ಹಾಗೂ ಅನಿವಾರ್ಯವೂ ಹೌದು. ಇದು ಸದಸ್ಯರುಗಳ ಹಾಗೂ ಸಮುದಾಯಗಳ ಒಳಿತಿಗಾಗಿ ಸೇವೆ ಸಲ್ಲಿಸುತ್ತಿರುವ ಸಹಕಾರ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃಧ್ಧಿಯ ವಿವಿಧ ಆಯಾಮಗಳೊಟ್ಟಿಗೆ ಕೆಲಸ ನಿರ್ವಹಿಸುತ್ತಿರುವ ಸಹಕಾರ ಸಂಸ್ಥೆಗಳು ವೃತ್ತಿಪರತೆ, ತಾಂತ್ರಿಕ ಅಳವಡಿಕೆ ಹಾಗೂ ಅನ್ವೇಷಣೆಗಳಿಗೆ ಆದ್ಯತೆ ನೀಡಿದರೆ ನಿರೀಕ್ಷಿಸಿದ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾಂತೇಶ ಬ. ಹವಳದ ಮಾತನಾಡುತ್ತಾ ತಮ್ಮ ಸಂಘದ ಪ್ರಸ್ತುತ ನಿರ್ದೇಶಕರಾದ ಧರ್ಮಣ್ಣ ಸಿದ್ದಾಪೂರವರು ಮರಣ ಹೊಂದಿದ ಬಗ್ಗೆ ವಿಷಾದ ವ್ಯಕ್ತಪಡಿಸಿ ಅವರ ಅನುಪಮ ಸೇವೆಯನ್ನು ಸ್ವರಿಸಿದರು. ಈ ವರ್ಷ ರಾಜ್ಯದಲ್ಲಿ ಅತ್ಯುತ್ತಮ ಮಳೆಯಾಗಿದ್ದು ರೈತರು ಕೃಷಿ ಉತ್ಪಾದನೆಯಲ್ಲಿ ಹೆಚ್ಚಿನ ಸಂಗ್ರಹಣೆ ಗುರಿ ಹೊಂದಿರುತ್ತಾರೆ. ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಹಕಾರಿ ಚಟುವಟಿಕೆಗಳನ್ನು ವಿಸ್ತರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಡರಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಮಾನಪ್ಪ ಲಮಾಣಿ, ಹಾಲು ಉತ್ಪಾದರಕ ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ ಯ. ಮಂಟೂರ, ಸಹಕಾರ ಸಂಘಗಳ ಲೆಕ್ಕ ಪರಿಶಶೊಧನಾ ಇಲಾಖೆ ಶಿರಹಟ್ಟಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಎಚ್. ಎ. ಬಂಡೆಣ್ಣವರ ಶಿರಹಟ್ಟಿ ತಾಲೂಕಾ ಸಹಕಾರ ಅಭಿವೃಧ್ಧಿ ಅಧಿಕಾರಿಗಳಾದ ಕೆ.ಸಿ.ಕೂಸನೂರಮಠ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕಚೇರಿ ಮಾರಾಟಾಧಿಕಾರಿಗಳಾದ ಬಿ. ಆರ್. ನೀಡಗುಂದಿ, ಕೆ.ಸಿ.ಸಿ. ಬ್ಯಾಂಕ್ ಲಿ., ಗದಗ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಬ್ಯಾಂಕ್ ನೀರಿಕ್ಷಕರುಗಳಾದ ಮಂಜುನಾಥ ಹೂಗಾರ ವಿಶ್ವನಾಥ ಎಚ್. ಲಮಾಣಿ, ಸಹಾಯಕ ವ್ಯವಸ್ಥಾಪಕರು, ಮತ್ತು ಗದಗ ಜಿಲ್ಲಾ ಮುಖ್ಯಸ್ಥರು, ಧಾರವಾಡ ಹಾಲು ಒಕ್ಕೂಟದ ಗದಗ ಉಪವಿಭಾಗ ಡಾ. ಪ್ರಸನ್ನ ಎಸ್. ಪಟ್ಟೇದ, ಧಾರವಾಡ ಹಾಲು ಒಕ್ಕೂಟ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ವಿಸ್ತರಣಾಧಿಕಾರಿಗಳಾದ ಶ್ರೀ ಬಸವರಾಜ ಎಸ್. ಜುಮ್ಮಣ್ಣವರ, ಕಿರಣ ಎಸ್. ಪಾಟೀಲ ಉಪಸ್ಥಿತರಿದ್ದರು.

ಸಹಕಾರ ಸಪ್ತಾಹದ ನಾಲ್ಕನೇ ದಿನದ ವಿಷಯ “ ರಾಷ್ಟ್ರೀಯ ಸಹಕಾರ ನೀತಿಯ ಪರಿಸರ ವ್ಯವಸ್ಥೆ ಭಾತರದ ಸಹಕಾರ ಸಂಸ್ಥೆಗಳಿಗೆ ರಚನಾತ್ಮಕ ಮಾರ್ಗಸೂಚಿ” ಹಾಗೂ ಸಾವಯವ ಕೃಷಿ ಕುರಿತು ಬಸವರಾಜ ಶಿ. ಏಣಗಿ ಹಿರಿಯ ವಿಜ್ಞಾನಿಗಳು, ಬೇಸಾಯ ಶಾಸ್ತ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಉಪನ್ಯಾಸ ನೀಡಿದರು. ಜಿಲ್ಲಾ ಆಯುಷ ಇಲಾಖೆಯ ಡಾ. ಜಯಪಾಲ್ ಸಿಂಗ್ ರವರು ಸಂಘದ ಸದಸ್ಯರ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.

ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನಿಂಗನಗೌಡ ಪ್ರ. ಪಾಟೀಲ ವಂದಿಸಿದರು

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande