ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ
ದಾವಣಗೆರೆ, 17 ನವೆಂಬರ್ (ಹಿ.ಸ.); ಆ್ಯಂಕರ್: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರ
ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ


ದಾವಣಗೆರೆ, 17 ನವೆಂಬರ್ (ಹಿ.ಸ.);

ಆ್ಯಂಕರ್:

ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ್ ಕ್ರೀಡಾಕೂಟ ಉದ್ಘಾಟಿಸುವರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅಧ್ಯಕ್ಷತೆ ವಹಿಸುವರು. ಮೋತಿ ವೀರಪ್ಪ ಕಾಲೇಜಿನ ಪ್ರಾಂಶುಪಾಲರಾದ ಶಿವಾನಂದ ಆರ್ ಕುಡಪಲಿ ಭಾಗವಹಿಸುವರು.

ಸ್ಪರ್ಧೆಗಳ ವಿವರ; ಮಹಿಳಾ ಮತ್ತು ಪುರಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕ್ರೀಡಾ ಸ್ಪರ್ಧೆಯಲ್ಲಿ ದೈಹಿಕ ವಿಕಲಚೇತನರಿಗೆ - ನಿಧಾನಗತಿ ಬೈಕ್ ರೇಸ್, ಶಾಟ್‍ಪುಟ್, ಜಾವಲಿನ್ ಥ್ರೋ, ಮ್ಯೂಸಿಕಲ್ ಚೇರ್ (ಮಹಿಳೆಯರಿಗೆ), ಸಂಪೂರ್ಣ ದೃಷ್ಟಿದೋಷವುಳ್ಳವರಿಗೆ 50ಮೀ. ರನ್ನಿಂಗ್ ರೇಸ್, ಶಾಟ್‍ಪುಟ್, ಮ್ಯೂಸಿಕಲ್ ಚೇರ್, ಚೆಸ್, ಕೇರಂ ವಾಕ್ ಮತ್ತು ಶ್ರವಣದೋಷವುಳ್ಳವರಿಗೆ –100ಮೀ ರನ್ನಿಂಗ್ ರೇಸ್, ಜಾವಲಿನ್ ಥ್ರೋ, ಶಾಟ್‍ಪುಟ್, ಕೇರಂ, ಚೆಸ್ ಬೆನ್ನುಹುರಿ ಅಪಘಾತ ಹೊಂದಿರುವವರಿಗೆ ಚೆಸ್, ಕೇರಂ ಮತ್ತು ವ್ಹೀಲ್‍ಚೇರ್ ರೇಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಆಸಕ್ತ ವಿಕಲಚೇತನರು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಖ್ಯೆಗೆ ಕರೆಮಾಡಿ ನೊಂದಣಿ ಮಾಡಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ; ಕೆ.ಕೆ ಪ್ರಕಾಶ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande