ರಸ್ತೆಯನ್ನು ಸುಗಮಗೊಳಿಸಿ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸಿದ ಶಾಸಕ ಕೆ.ವೈ.ನಂಜೇಗೌಡ
ರಸ್ತೆಯನ್ನು ಸುಗಮಗೊಳಿಸಿ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸಿದ ಶಾಸಕ ಕೆ.ವೈ.ನಂಜೇಗೌಡ
ಚಿತ್ರ ; ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೆ ಬ್ರಿಡ್ಜ್ ಕೆಳಭಾಗದ ರಸ್ತೆ ತೆರವುಗೊಳ್ಳಲು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಖುದ್ದು ಸ್ಥಳಕ್ಕೆ ಬೇಟಿ ನೀಡಿ ಅದನ್ನು ತೆರವುಗೊಳಿಸಿ ಸುಗಮಗೊಳಿಸಿದರು.

ಕೋಲಾರ, ೧೭ ನವಂಬರ್ (ಹಿ.ಸ.) :

ಆ್ಯಂಕರ್ : ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೆ ಬ್ರಿಡ್ಜ್ ಕೆಳಭಾಗದ ರಸ್ತೆ ತೆರವುಗೊಳ್ಳಲು ಯಲುವಗುಳಿ ಗ್ರಾಮದ ಹಾಗೂ ಕೆ.ಜಿ.ಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಸತೀಶರಾಜಣ್ಣ ಹಾಗೂ ಗ್ರಾಮಸ್ಥರು ಇಂದು ಶಾಸಕರಿಗೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಖುದ್ದು ಸ್ಥಳಕ್ಕೆ ಬೇಟಿ ನೀಡಿ ಅದನ್ನು ತೆರವುಗೊಳಿಸಿ ಸುಗಮಗೊಳಿಸಿದ ಘಟನೆ ಸೋಮವಾರ ನಡೆದಿದೆ.

ನೂತನ ಟೇಕಲ್ ರೈಲ್ವೆ ಬ್ರಿಡ್ಜ್ನ ಕೆಳಗಿನ ರಸ್ತೆಗೆ ಪರ್ಯಾಯವಾಗಿ ಬ್ರಿಡ್ಜ್ ಪಕ್ಕದಲ್ಲೆ ಬೇರೊಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು ಸಾರ್ವಜನಿಕರಿಗೆ ಅದನ್ನು ಬಳಸಲು ತಿಳಿಸಲಾಗಿತ್ತು.

ಆದರೆ ಅದು ತಿರುವು ರಸ್ತೆಯಾಗಿದ್ದು ಗ್ರಾಮದಿಂದ ಬರಲು ನಮಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರ ಪರ ಸತೀಶರಾಜಣ್ಣರವರು ಶಾಸಕರಿಗೆ ನಮಗೆ ಇದೆ ರಸ್ತೆ ಚೆನ್ನಾಗಿದೆ ಎಂದು ತಿಳಿಸಿದರು ಆದರೆ ರೈಲ್ವೆ ಬ್ರಿಡ್ಜ್ ಕೆಳಭಾಗದ ಸ್ಥಳವು ಕೆ.ಜಿ.ಹಳ್ಳಿ ಗ್ರಾಮದವರಿಗೆ ಸೇರಿದ್ದು ಅದಕ್ಕೆ ಅವರಿಗೆ ಯಾವುದೇ ರೀತಿಯಾದ ಇಲಾಖೆಯಿಂದ ಪರಿಹಾರ ಸಿಕ್ಕಿಲ್ಲವಾಗಿದೆ. ಇದನ್ನು ಸ್ಥಳಕ್ಕೆ ಬಂದ ಶಾಸಕರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸಂಬಂಧಪಟ್ಟವರ ಜೊತೆಗೆ ಅಲ್ಲಿಯ ಚರ್ಚಿಸಿದ ಶಾಸಕ ಕೆ.ವೈ.ನಂಜೇಗೌಡರು ರಸ್ತೆಯನ್ನು ಸುಗಮಗೊಳಿಸಿದರು. ಈ ವೇಳೆ ಮಾಸ್ತಿ ಪಿಐ ಓಂಪ್ರಕಾಶಗೌಡ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಚಿತ್ರ ; ಮಾಲೂರು ತಾಲ್ಲೂಕಿನ ಟೇಕಲ್ ರೈಲ್ವೆ ಬ್ರಿಡ್ಜ್ ಕೆಳಭಾಗದ ರಸ್ತೆ ತೆರವುಗೊಳ್ಳಲು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಖುದ್ದು ಸ್ಥಳಕ್ಕೆ ಬೇಟಿ ನೀಡಿ ಅದನ್ನು ತೆರವುಗೊಳಿಸಿ ಸುಗಮಗೊಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande