
ನವದೆಹಲಿ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಪೋರ್ಟೊ ನಗರದ ಎಸ್ಟಾಡಿಯೊ ಡೊ ಡ್ರಾಗಾವೊ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಅರ್ಹತಾ ಪಂದ್ಯದಲ್ಲಿ ಅರ್ಮೇನಿಯಾವನ್ನು 9-1 ಗೋಲುಗಳಿಂದ ಕಟ್ಟಿಹಾಕಿ, ಪೋರ್ಚುಗಲ್ 2026ರ ಫಿಫಾ ವಿಶ್ವಕಪ್‌ಗೆ ಪ್ರವೇಶ ಪಡೆದಿದೆ. ಇದು ಪೋರ್ಚುಗಲ್ ತಂಡದ ಸತತ ಏಳನೇ ವಿಶ್ವಕಪ್ ಪ್ರವೇಶವಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅಮಾನತು ಹಿನ್ನೆಲೆ ತಂಡದಲ್ಲಿ ಇರಲಿಲ್ಲ, ಆದತೆ ರಾಬರ್ಟೊ ಮಾರ್ಟಿನೆಜ್ ಅವರ ಮಾರ್ಗದರ್ಶನದಲ್ಲಿ ಪೋರ್ಚುಗಲ್ ಅಬ್ಬರದ ಆಟ ತೋರಿತು. ಬ್ರೂನೋ ಫೆರ್ನಾಂಡಿಸ್ ಮತ್ತು ಯುವ ಜೋವೊ ನೆವೆಸ್ ತಲಾ ಹ್ಯಾಟ್ರಿಕ್ ಮಾಡುವ ಮೂಲಕ ವಿಶ್ವಕಪ್ ಪ್ರವೇಶ ಖಚಿತಪಡಿಸಿದರು.
2026ರಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪೋರ್ಚುಗಲ್ ಮತ್ತೊಮ್ಮೆ ಬಲಿಷ್ಠ ಸಾಧನೆ ಮಾಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ನಿರಂತರ ಸಾಧನೆಯೊಂದಿಗೆ ತಂಡವು ತಂತ್ರ, ಸಾಮರ್ಥ್ಯ ಮತ್ತು ಅನುಭವದ ಸಮನ್ವಯದಿಂದ ವಿಶ್ವಕಪ್ ಜಯವೇ ಮುಂದಿನ ಗುರಿಯಾಗಿದೆ ಎಂದು ಪರಿಣಿತರ ಅಭಿಪ್ರಾಯ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa