
ವಿಜಯಪುರ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಸಹಜೀವನ ನಡೆಸುತ್ತಿದ್ದ ಮಹಿಳೆಯಿಂದ ಪ್ರಿಯಕರನ ಕೊಲೆಗೈದಿರುವ ಘಟನೆ ವಿಜಯಪುರ ನಗರದ ಜುಮ್ಮಾ ಮಸೀದಿ ಬಳಿಯ ಅಮನ್ ಕಾಲೋನಿಯಲ್ಲಿ ನಡೆದಿದೆ.
ಸಮೀರ್ ಉರ್ಫ ಪಿಕೆ ಇನಾಂದಾರ್ (26) ಕೊಲೆಯಾದ ಯುವಕ. ಇನ್ನು ಸಹೋದರನ ಸಹಾಯದಿಂದ ಸಹಜೀವನ ನಡೆಸುತ್ತಿದ್ದ ಸಮೀರ್‌ನ್ನು ತಯ್ಯಬಾ ಭಾಗವಾನ್ ಹಾಗೂ
ತಯ್ಯಾಬಾ ಸಹೋದರ
ಅಸ್ಲಮ್ ಭಾಗವಾನ್ ಸಹಾಯದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ದಿನನಿತ್ಯ ಸಮೀರ್ ಕಿರುಕುಳದಿಂದ ಬೇಸತ್ತು ಕೊಲೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸ್ಥಳಕ್ಕೆ ಗೋಲಗುಂಬಜ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.
ಸಮೀರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು
ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande