
ಶಿವಮೊಗ್ಗ, 17 ನವೆಂಬರ್ (ಹಿ.ಸ.):
ಆ್ಯಂಕರ್:
ಶಿವಮೊಗ್ಗ ತಾಲೂಕಿನಲ್ಲಿ ಇ-ಪೌತಿ ಖಾತೆ ಬದಲಾವಣೆಯು ನಡೆಯುತ್ತಿದ್ದು, ಅದರಲ್ಲಿ ವಂಶವೃಕ್ಷ ಮಾಡುವ ಸಂದರ್ಭದಲ್ಲಿ ಖಾತೆದಾರರು ಪೌತಿಯಾದ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುತ್ತಿರುವುದು ಕಂಡುಬಂದಿದೆ. ಈಗಾಗಲೇ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷ ಕೋರಿ ಸಲ್ಲಿಸಿರುವ ಅರ್ಜಿದಾರರ ವಿರುದ್ಧ ಭಾರತೀಯ ನಾಗರೀಕ ಸುರಕ್ಷ ಸಂಹಿತ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ.
ಇನ್ನು ಮುಂದೆ ಯಾರಾದರೂ ಪೌತಿ ವಾರಸುದಾರರ ಹೆಸರನ್ನು ಕೈಬಿಟ್ಟು ವಂಶವೃಕ್ಷಕ್ಕೆ ಅರ್ಜಿಯನ್ನು ಸಲ್ಲಿಸಿರುವುದು ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಾಖಲಾತಿಯನ್ನು ಪಡೆಯುವುದು ಕಂಡುಬಂದಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಕಾಯ್ದೆಯ ಹಾಗೂ ಚಾಲ್ತಿಯಲ್ಲಿರುವ ಇತರೆ ಅಧಿನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕು ತಹಶೀಲ್ದಾರ್ ರಾಜೀವ್ ವಿ.ಎಸ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa