
ಕೊಪ್ಪಳ, 17 ನವೆಂಬರ್ (ಹಿ.ಸ.)
ಆ್ಯಂಕರ್: ತಂಪು ಪಾನೀಯದಲ್ಲಿ ಬೆರೆಸಿದ ಮದ್ಯ ಕುಡಿಸಿ 39 ವರ್ಷದ ಮಹಿಳೆಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿ ಬಂಧನಕ್ಕೆ ಒಳಪಟ್ಟ ಘಟನೆ ನಡೆದಿದೆ.
ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಗೃಹಿಣಿ ತನ್ನ ಪತಿಗೆ ಕರ್ತವ್ಯಕ್ಕೆ ಹೋಗುವುದಾಗಿ ಹೇಳಿ ಪರಿಚಯಸ್ಥರಿಗೆ ಕೊಟ್ಟಿದ್ದ ಸಾಲದ ಹಣವನ್ನು ಹಿಂದಿರುಗಿ ಪಡೆಯಲು ಹೋದಾಗ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಲಕ್ಷ್ಮಣ್, ಗೃಹಿಣಿಯಿಂದ ರೂಪಾಯಿ 5,000 ಹಣವನ್ನು ಸಾಲವಾಗಿ ಪಡೆದಿದ್ದನು. ಗೃಹಿಣಿಯು ಬಾಕಿ ಹಣವನ್ನು ಹಿಂದಿರುಗಿಸಲು ಕೇಳಿದಾಗ ಆರೋಪಿ ಲಕ್ಷ್ಮಣ್ ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಕೂಡಿಸಿಕೊಂಡು, ಕುಷ್ಟಗಿ ಸಮೀಪದ ಮದ್ದೂರು ಬಳಿಯ ಹೊಲಕ್ಕೆ ಕರೆದುಕೊಂಡು ಹೋಗಿ, ಜ್ಯೂಸ್‍ನಲ್ಲಿ ಮತ್ತು ಬರುವ ಪದಾರ್ಥವನ್ನು ಕಲಿಸಿ, ಕುಡಿಸಿ ಆಕೆ ಮತ್ತಿನಿಂದ ನಿದ್ರಾವಸ್ತೆಗೆ ತಲುಪಿದ ನಂತರ ಮೂವರು ಸ್ನೇಹಿತರ ಜೊತೆಗೂಡಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಗೃಹಿಣಿ ದೂರು ದಾಖಲಿಸಿದ್ದಾರೆ.
ಮದ್ದೂರು ಬಳಿಯ ಹೊಲದಲ್ಲಿರುವ ಹಾಳುಬಿದ್ದ ಮನೆಯಲ್ಲಿ ಭಾನುವಾರ ಸಂಜೆ 5 ರಿಂದ 5.45 ರ ನಡುವೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ.
ಸಂತ್ರಸ್ತೆ ಅಸ್ವಸ್ತಳಾದ ನಂತರ, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಯಲಬುರ್ಗಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳ ಡಿಎಸ್‍ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್