
ಕೊಪ್ಪಳ, 17 ನವೆಂಬರ್ (ಹಿ.ಸ.)
ಆ್ಯಂಕರ್:
ಕೊಪ್ಪಳ ತಾಲ್ಲೂಕಿನ ಇಂದಿರಾಗಾಂಧಿ ವಸತಿ ಶಾಲೆ(ಪ.ಪಂ-656) ಕರ್ಕಿಹಳ್ಳಿ ಈ ಶಾಲೆಯಲ್ಲಿ ಖಾಲಿ ಇರುವ ಗಣಿತ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಅಥಿತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಗಣಿತ ಅಥಿತಿ ಶಿಕ್ಷಕರ ಹುದ್ದೆಗೆ ಬಿಎಸ್ಸಿ ಬಿಎಡ್ (ಸಿಬಿಜೆಡ್), ಟಿಇಟಿ ವಿದ್ಯಾರ್ಹತೆ ಹೊಂದಿದವರಿಗೆ ಪ್ರಥಮ ಆದ್ಯತೆ ಇರುತ್ತದೆ. ಆಸಕ್ತ ಶಿಕ್ಷಕರು ನವೆಂಬರ್ 25ರ ಒಳಗಾಗಿ ಅರ್ಜಿಯನ್ನು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ(ಪ.ಪಂ-656) ಕರ್ಕಿಹಳ್ಳಿ ತಾ|| ಜಿ|| ಕೊಪ್ಪಳ (ಶಾಲೆಯು ಪ್ರಸ್ತುತ ದದೇಗಲ್‌ನ ಗುಳಗಣ್ಣನವರ ಕಾಲೇಜಿನಲ್ಲಿ ನೆಡೆಯುತ್ತಿದ್ದು) ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಸತಿ ಶಾಲೆಯ ಪ್ರಾಂಶುಪಾಲರಾದ ಕುಸುಮಕುಮಾರಿ ಮೊ.ಸಂ: 8277587634 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್