
ಕೊಪ್ಪಳ, 17 ನವೆಂಬರ್ (ಹಿ.ಸ.)
ಆ್ಯಂಕರ್: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಭತ್ತಕ್ಕೆ ಪರ್ಯಾಯ ಕೆಲವು ಬೆಳೆ ಬೆಳೆಯಲು ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಿಂದ ಸಲಹೆಗಳನ್ನು ನೀಡಲಾಗಿದೆ.
ಭತ್ತಕ್ಕೆ ಪರ್ಯಾಯ ಬೆಳೆಗಳು:
ಭತ್ತದ ಬದಲಾಗಿ ಸಾಸಿವೆ (ಎನ್.ಆರ್.ಸಿ.ಹೆಚ್.ಬಿ-101, ಪಿ.ಎಮ್-30, ಕೆ.ಎಮ್-29), ಎಳ್ಳು (ಶ್ವೇತಾ, ವಿ.ಆರ್.ಐ-1), ಮೆಕ್ಕೆಜೋಳ (ಆರ್.ಸಿ.ಎಮ್.ಎಚ್-2 & 4, ಒಂದು ಅಥವಾ ಎರಡು ನೀರು ಕೊಡಬೇಕು), ಕಡಲೆ (ಅಣ್ಣಿಗೇರಿ-1, ಜೆಜಿ-11, ಬಿ.ಜಿ.ಡಿ-103), ಸೂರ್ಯಕಾಂತಿ (ಕೆ.ಬಿ.ಎಸ್.ಹೆಚ್-44, 53) (ಆರ್.ಎಫ್.ಎಸ್.ಹೆಚ್-700, ಆರ್.ಎಫ್.ಎಸ್.ಹೆಚ್-1877), ಹೆಸರು (ಬಿ.ಜಿ.ಎಸ್-9, ಪಿ.ಡಿ.ಎಮ್-139), ಭತ್ತ ಉದ್ದು (ಡಿ.ಯು-1, ಎಲ್.ಬಿ.ಜಿ-752), ಹುರುಳಿ (ಕ್ರೀಡಾ-1, ಪಿ.ಹೆಚ್.ಜಿ-9), ಅಲಸಂದಿ (ಸಿ-152, ಡಿ.ಸಿ.-15) ಬೆಳೆಯಬಹುದು. ನೀರು ಲಭ್ಯವಿದ್ದರೆ ಟೋಮ್ಯಾಟೋ, ಕಲ್ಲಂಗಡಿ, ಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಬೀಟ್‌ರೂಟ್, ಈ ತರಕಾರಿಗಳನ್ನು ಬೆಳೆಯಬಹುದು. ನೀರಿನ ಅನುಕೂಲವಿದ್ದಲ್ಲಿ ತರಕಾರಿಗಳು ಸೊಪ್ಪಿನ ಬೆಳೆಗಳಾದ ಪಾಲಕ್, ಮೆಂತ್ಯೆ, ಸಬ್ಬಸಿಗೆ, ರಾಜಗಿರಿ, ಉಳ್ಳಿಚಿಕಾ, ಖಾಸಗಿ ತಳಿಗಳನ್ನು ಬೆಳೆಯಬಹುದು. ಉಳಿದಿರುವ ತೇವಾಂಶದಿಂದ ಹಸಿರೆಲೆ ಡಯಾಂಚಾ, ಸೆಣಬು, ಪಿಳ್ಳೆಪೆಸರು ಸಹ ಬೆಳೆಯಬಹುದು. ಇದಲ್ಲದೇ ಭತ್ತ ಮೇವಿನ ಬೆಳೆಗಳ (ಹೈಬ್ರಿಡ್ ನೇಪಿಯರ್, ಸಿ.ಓ.ಎಫ್.ಹೆಚ್-29, ಸಿ.ಓ-4) ಬೆಳೆಯಬಹುದಾಗಿದೆ.
ನೀರು ಲಭ್ಯ ಇರುವ ಪ್ರದೇಶದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ತರಕಾರಿ ಬೆಳೆಗಳನ್ನು ಬೆಳೆಯಬಹುದು. ಕಡಿಮೆ ನೀರಿರುವ ಪ್ರದೇಶದಲ್ಲಿ ಶೇಂಗಾ, ಹೆಸರು, ಉದ್ದು, ಸೂರ್ಯಕಾಂತಿ, ಅಲಸಂದಿ ಹಾಗೂ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು ಮತ್ತು ಅತಿ ಕಡಿಮೆ ನೀರಿರುವ ಪ್ರದೇಶದಲ್ಲಿ ಸಾಸಿವೆ, ಕುಸುಬೆ, ಹುರುಳಿ, ಹಿಂಗಾರಿ ಜೋಳ, ಹೆಸರು, ಉದ್ದು ಬೆಳೆಯಬಹುದಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್