ಕರ್ನಾಟಕ ಗ್ರಾಮೀಣ ಬ್ಯಾಂಕ್‍ ಕಿರುಕುಳದ ವಿರುದ್ಧ ಗ್ರಾಹಕರಿಂದ ಪ್ರತಿಭಟನೆ
ಬಳ್ಳಾರಿ, 17 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಶ್ರೀಧರಗಡ್ಡೆ ಶಾಖೆಯಲ್ಲಿ ಗ್ರಾಹಕಸ್ನೇಹಿ ವ್ಯವಹಾರಗಳು ನಡೆಸದೇ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಗ್ರಾಹಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರ ಪರವಾಗಿ ಅಖಿಲ ಭ
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಕಿರುಕುಳದ ವಿರುದ್ಧ ಗ್ರಾಹಕರಿಂದ ಪ್ರತಿಭಟನೆ


ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಕಿರುಕುಳದ ವಿರುದ್ಧ ಗ್ರಾಹಕರಿಂದ ಪ್ರತಿಭಟನೆ


ಬಳ್ಳಾರಿ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಶ್ರೀಧರಗಡ್ಡೆ ಶಾಖೆಯಲ್ಲಿ ಗ್ರಾಹಕಸ್ನೇಹಿ ವ್ಯವಹಾರಗಳು ನಡೆಸದೇ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಗ್ರಾಹಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರ ಪರವಾಗಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕವು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದೆ.

ಎಸ್‍ಯುಸಿಐ(ಸಿ)ನ ಗ್ರಾಮೀಣ ಸ್ಥಳೀಯ ಸಮಿತಿ ಕಾರ್ಯದರ್ಶಿ ಎ. ದೇವದಾಸ್ ಅವರು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಂಸ್ಥೆಯು ಉತ್ತಮವಾದ ಸೇವೆಯನ್ನು ನೀಡುತ್ತಿತ್ತು. ಶ್ರೀಧರಗಡ್ಡೆ ಗ್ರಾಮದಲ್ಲಿರುವ ಶಾಖೆಯು ಗ್ರಾಹಕರಿಗೆ ನೀಡುವ ಸೇವೆಯಲ್ಲಿ ಕಿರುಕುಳ ನೀಡುತ್ತಿದೆ. ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಅನಕ್ಷರಸ್ಥ ಗ್ರಾಹಕರು ಹಣ ಪಡೆಯಲು ಮತ್ತೊಬ್ಬರನ್ನು ಸಾಕ್ಷಿಯಾಗಿ ಕರೆತರಬೇಕು. ಬಂಗಾರದ ಆಭರಣಗಳ ಅಡವಿಟ್ಟು ತೆಗೆದುಕೊಂಡ ಸಾಲಕ್ಕೆ, ಬೆಳೆ ಸಾಲಕ್ಕೂ ಉಳಿತಾಯ ಖಾತೆಯಲ್ಲಿರುವ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಕಾನೂನಿಗೆ ವಿರುದ್ಧವಾದ್ದು ಎಂದು ಅವರು ಆರೋಪಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯರಾದ ಈ.ಹನುಮಂತಪ್ಪ, ಜಿಲ್ಲಾ ಕಾರ್ಯದರ್ಶಿ ಗುರಳ್ಳಿರಾಜ, ಸಂಘದ ಜಿಲ್ಲಾ ಅಧ್ಯಕ್ಷರಾದ ಗೋವಿಂದ್, ರೈತರಾದ ಆಶಾಬೇಗಂ, ನಿಜಾಂ, ವೀರೇಶಪ್ಪ, ಹನುಮಂತಪ್ಪ, ಮುಕ್ಕಣ್ಣ ಸೇರಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande