
ಗದಗ, 17 ನವೆಂಬರ್ (ಹಿ.ಸ.)
ಆ್ಯಂಕರ್:
ವಿಶ್ವ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ 3 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಪರೆನ್ಸ್ ಹಾಲ್‌ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಮಹಾಂತೇಶ್ ಕೆ ಮಾತನಾಡಿ ವಿಶ್ವ ವಿಕಲಚೇತನರ ದಿನಾಚರಣೆ ನಿಮಿತ್ಯ ದಿನಾಂಕ:24/11/2025 ರಂದು ಬೆಳಿಗ್ಗೆ: 9:00 ಗಂಟೆಗೆ ನಗರದ ಕೆ.ಎಚ್.ಪಾಟೀಲ್, ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ವಿಶ್ವ ವಿಕಲಚೇತನರ ದಿನಾಚರಣೆ ದಿನದ ಸಕಲ ಸಿದ್ಧತೆಗೆ ಕ್ರಮ ವಹಿಸಲಾಗಿದೆ. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನಗೈದ (ರಾಜ್ಯ, ಅಂತರರಾಜ್ಯ, ರಾಷ್ಟೀಯ ಮಟ್ಟದಲ್ಲಿ) ವಿಕಲಚೇತನ ವ್ಯಕ್ತಿಗಳಿಗೆ ಸನ್ಮಾನಿಸಲಾಗುವುದು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿನ ವಿಜೇತರಿಗೆ ವಿಶ್ವ ವಿಕಲಚೇತನರ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಆಸಕ್ತ ವಿಕಲಚೇತನರು ನವೆಂಬರ್ 26 ರೊಳಗಾಗಿ ಪ್ರಸ್ತಾವನೆಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿಗಳ ಕಚೇರಿ, ಗದಗ ಇಲ್ಲಿ ಸಲ್ಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಆರ್.ಎಸ್.ಬುರುಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಿಕಲಚೇತನ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಗದಗ ಸದಸ್ಯರು, ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು/ಸಂಘಗಳ ಮುಖ್ಯಸ್ಥರು, ಜಿಲ್ಲೆಯ ಎಲ್ಲಾ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳು, ವಿಕಲಚೇತನರು ಹಾಗೂ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ವಿಶ್ವ ವಿಕಲಚೇತನರ ದಿನಾಚರಣೆ ನಿಮಿತ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು
2025-26 ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯ ನಿಮಿತ್ಯ ವಿಕಲಚೇತನರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನವೆಂಬರ್ 24 ರಂದು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದೈಹಿಕ, ಬುದ್ಧಿಮಾಂದ್ಯ, ಶ್ರವಣನ್ಯೂನತೆಯುಳ್ಳವರು ಮತ್ತು ಅಂಧರು/ ದೃಷ್ಟಿದೋಷವುಳ್ಳ ವಿಕಲಚೇತನರು ಕ್ರೀಡಾ ಅಥವಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲು ಇಚ್ಛಿಸುವ ವಿಕಲಚೇತನರು ಈ ಕೆಳಕಂಡವರಲ್ಲಿ ನವೆಂಬರ್ 20 ರೊಳಗಾಗಿ ಹೆಸರು ನೊಂದಾಯಿಸಬಹುದಾಗಿದೆ.
ಗದಗ ಜಿಲ್ಲೆಯ ತಾಲ್ಲೂಕ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಎಮ್.ಆರ್.ಡಬ್ಲ್ಯೂ ತಾಲ್ಲೂಕ್ ಪಂಚಾಯತ, ಗದಗ 8867556465 ; ಎಮ್.ಆರ್.ಡಬ್ಲ್ಯೂ ತಾಲ್ಲೂಕ್ ಪಂಚಾಯತ, ರೋಣ – 9741615926 ; ಎಮ್.ಆರ್.ಡಬ್ಲೂ ತಾಲ್ಲೂಕ್ ಪಂಚಾಯತ, ಮುಂಡರಗಿ 9611922445, ಎಮ್.ಆರ್.ಡಬ್ಲ್ಯೂ, ತಾಲ್ಲೂಕ್ ಪಂಚಾಯತ, ಶಿರಹಟ್ಟಿ 8951128679 ; ಎಮ್.ಆರ್.ಡಬ್ಲ್ಯೂ, ತಾಲ್ಲೂಕ್ ಪಂಚಾಯತ, ನರಗುಂದ- 9591679022 ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ (ಡಿಡಿಆರ್‌ಸಿ) 7795100806 ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ನೆಲಮಹಡಿ, ಕೊಠಡಿ ಸಂಖ್ಯೆ: 029 ರಲ್ಲಿ ದಾಖಲಾತಿಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ ಹಾಗೂ ವಿಕಲಚೇತನ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.
ಕ್ರೀಡಾ ಸ್ಪರ್ಧೆಗಳ ವಿವರ :
ಕಿರಿಯ ವಿಭಾಗ ( 6 ರಿಂದ 12 ವರ್ಷ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾವಲಿನ್ ಥ್ರೋ, ಗುಂಡು ಎಸೆತ ; ಅಂಧರಿಗೆ ಕೇನ್ ರನ್ , ಗುಂಡು ಎಸೆತ ; ಶ್ರವಣದೋಷ ಮತ್ತು ವಾಕ್ ದೋಷ್ ಇರುವವರಿಗೆ ; 100 ಮೀಟರ್ ಓಟ, ಗುಂಡು ಎಸೆತ , ಬುದ್ಧಿಮಾಂದ್ಯರಿಗೆ ಮ್ಯೂಜಿಕಲ್ ಚೇರ್, ಚಂಡು ಎಸೆತ ಸ್ಪರ್ಧೆಗಳು ಜರುಗಲಿವೆ.
ಹಿರಿಯ ವಿಭಾಗ ( 13 ರಿಂದ 18 ವರ್ಷ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾವಲಿನ್ ಥ್ರೋ , ಗುಂಡು ಎಸೆತ ; ಅಂಧರಿಗೆ ಕೇನ್ ರನ್ , ಗುಂಡು ಎಸೆತ ; ಶ್ರವಣದೋಷ ಮತ್ತು ವಾಕ್ ದೋಷ್ ಇರುವವರಿಗೆ ; 100 ಮೀಟರ್ ಓಟ, ಗುಂಡು ಎಸೆತ , ಬುದ್ಧಿಮಾಂದ್ಯರಿಗೆ ಮ್ಯೂಜಿಕಲ್ ಚೇರ್, ಚಂಡು ಎಸೆತ ಸ್ಪರ್ಧೆಗಳು ಜರುಗಲಿವೆ.
ಹಿರಿಯ ವಿಭಾಗ ( 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾವಲಿನ್ ಥ್ರೋ , ಗುಂಡು ಎಸೆತ ; ಅಂಧರಿಗೆ ಕೇನ್ ರನ್ , ಗುಂಡು ಎಸೆತ ; ಶ್ರವಣದೋಷ ಮತ್ತು ವಾಕ್ ದೋಷ್ ಇರುವವರಿಗೆ ; 100 ಮೀಟರ್ ಓಟ, ಗುಂಡು ಎಸೆತ , ಬುದ್ಧಿಮಾಂದ್ಯರಿಗೆ ಮ್ಯೂಜಿಕಲ್ ಚೇರ್, ಚಂಡು ಎಸೆತ ಸ್ಪರ್ಧೆಗಳು ಜರುಗಲಿವೆ.
ಹಿರಿಯ ವಿಭಾಗ ( 18 ವರ್ಷ ಮೇಲ್ಪಟ್ಟ ಪುರುಷ ) : ದೈಹಿಕ ವಿಕಲರಿಗೆ ಸಿಟಿಂಗ್ ಥ್ರೋಬಾಲ್ ಸ್ಪರ್ಧೆ ಇರುತ್ತದೆ.
ಸಾಂಸ್ಕೃತಿಕ ಸ್ಪರ್ಧೆಗಳ ವಿವರ:
ಕಿರಿಯ ವಿಭಾಗ ( 6 ರಿಂದ 12 ವರ್ಷ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾನಪದ ಗೀತೆ , ಭಾವಗೀತೆ : ಅಂಧರಿಗೆ ಜಾನಪದ ಗೀತೆ ಮತ್ತು ಭಾವಗೀತೆ ; ಶ್ರವಣದೋಷ ಮತ್ತು ವಾಕ್ ದೋಷ ಇರುವವರಿಗೆ ಚಿತ್ರಕಲೆ , ನೃತ್ಯ, ಬುದ್ಧಿಮಾಂದ್ಯ ರಿಗೆ ಫ್ಯಾನ್ಸಿ ಡ್ರೆಸ್ ( ವೇಷಭೂಷಣ).
ಹಿರಿಯ ವಿಭಾಗ ( 13 ರಿಂದ 18 ವರ್ಷ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾನಪದ ಗೀತೆ , ಭಾವಗೀತೆ : ಅಂಧರಿಗೆ ಜಾನಪದ ಗೀತೆ ಮತ್ತು ಭಾವಗೀತೆ ; ಶ್ರವಣದೋಷ ಮತ್ತು ವಾಕ್ ದೋಷ ಇರುವವರಿಗೆ ಚಿತ್ರಕಲೆ , ನೃತ್ಯ, ಬುದ್ಧಿಮಾಂದ್ಯ ರಿಗೆ ಫ್ಯಾನ್ಸಿ ಡ್ರೆಸ್ ( ವೇಷಭೂಷಣ).
ಹಿರಿಯ ವಿಭಾಗ ( 18 ರಿಂದ ಮೇಲ್ಪಟ್ಟ ಪುರುಷ ಮತ್ತು ಮಹಿಳೆ)
ದೈಹಿಕ ವಿಕಲರಿಗೆ ಜಾನಪದ ಗೀತೆ , ಭಾವಗೀತೆ : ಅಂಧರಿಗೆ ಜಾನಪದ ಗೀತೆ ಮತ್ತು ಭಾವಗೀತೆ ; ಶ್ರವಣದೋಷ ಮತ್ತು ವಾಕ್ ದೋಷ ಇರುವವರಿಗೆ ಚಿತ್ರಕಲೆ , ನೃತ್ಯ, ಬುದ್ಧಿಮಾಂದ್ಯ ರಿಗೆ ಫ್ಯಾನ್ಸಿ ಡ್ರೆಸ್ ( ವೇಷಭೂಷಣ) ಸ್ಪರ್ಧೆ ಜರುಗಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP