ಮೂಲ ಸೌಕರ್ಯ ನೀಡುವಂತೆ ಪ್ರಧಾನಿಗೆ ಪತ್ರವನ್ನು ಬರೆದ ಬಾಲಕ
ಗದಗ, 17 ನವೆಂಬರ್ (ಹಿ.ಸ.) ಆ್ಯಂಕರ್: ಗದಗ–ಬೆಟಗೇರಿ ಅವಳಿ ನಗರದ ಶಿವಾಜಿ ನಗರದ ಜನರ ದೈನಂದಿನ ಜೀವನವೇ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟವಾಗಿದೆ. 30ಕ್ಕೂ ಹೆಚ್ಚು ವರ್ಷಗಳಿಂದ ನಿವಾಸಿಗಳಿರುವ ಈ ಭಾಗದಲ್ಲಿ ಇಂದಿಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿಲ್ಲ. ಮಣ್ಣಿನ ರಸ್ತೆಯಲ್ಲಿ ತಗ್ಗು, ಗುಂಡಿಗ
ಫೋಟೋ


ಫೋಟೋ


ಗದಗ, 17 ನವೆಂಬರ್ (ಹಿ.ಸ.)

ಆ್ಯಂಕರ್:

ಗದಗ–ಬೆಟಗೇರಿ ಅವಳಿ ನಗರದ

ಶಿವಾಜಿ ನಗರದ ಜನರ ದೈನಂದಿನ ಜೀವನವೇ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟವಾಗಿದೆ. 30ಕ್ಕೂ ಹೆಚ್ಚು ವರ್ಷಗಳಿಂದ ನಿವಾಸಿಗಳಿರುವ ಈ ಭಾಗದಲ್ಲಿ ಇಂದಿಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿಲ್ಲ. ಮಣ್ಣಿನ ರಸ್ತೆಯಲ್ಲಿ ತಗ್ಗು, ಗುಂಡಿಗಳು, ಮಳೆ ಬಂದರೆ ಸಂಪೂರ್ಣ ಕೆಸರುಮಯ ಪರಿಸ್ಥಿತಿ, ಹೂಳು ತುಂಬಿಕೊಂಡ ಚರಂಡಿಗಳು, ಅಸಮರ್ಪಕ ಕುಡಿಯುವ ನೀರಿನ ಸರಬರಾಜು ಈ ಎಲ್ಲ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನಗಳು ವಿಫಲವಾಗಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಈ ಪ್ರದೇಶದ 8ನೇ ತರಗತಿಯ ವಿದ್ಯಾರ್ಥಿ ಸಾಯಿನಾಥ್ ಕಾರ್ಮೂತಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು ಗಮನಾರ್ಹ. ತನ್ನ ಪ್ರದೇಶದ ಜನರ ಪರದಾಟವನ್ನು ವಿವರಿಸಿ, ಕನಿಷ್ಠ ಮೂಲ ಸೌಕರ್ಯ ಒದಗಿಸಲು ವಿನಂತಿ ಸಲ್ಲಿಸಿದ್ದಾನೆ.

ಮಳೆಯಾದ್ರೆ ಮನೆಯಿಂದ ಹೊರಗಡೆ ಬರಲು ಆಗಲ್ಲ, ರಸ್ತೆ ಸಂಪೂರ್ಣ ಕೆಸರು ಆಗ್ತದೆ, ಶಾಲೆಗೆ ಹೋಗೋ ಮಕ್ಕಳಿಗೆ ಅದೆಷ್ಟು ತೊಂದರೆ, ಎಂದು ಪತ್ರದಲ್ಲಿ ದಾಖಲಿಸಿದ್ದಾನೆ.

ಸ್ಥಳೀಯರು ಹಲವಾರು ಬಾರಿ ಗದಗ–ಬೆಟಗೇರಿ ನಗರಸಭೆ, ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬೇಸರಗೊಂಡಿದ್ದಾರೆ. ಚರಂಡಿ ಸ್ವಚ್ಛತೆ ಸರಿಯಾಗಿಲ್ಲ, ನೀರಿನ ಸಮಸ್ಯೆ ಮುಂದುವರಿದೆಯೆಂಬ ದೂರು ಸಾಮಾನ್ಯವಾಗಿದೆ.

ಸಾಯಿನಾಥ್ ಬರೆದ ಪತ್ರದ ವಿಚಾರ ತಿಳಿದ ಸ್ಥಳೀಯರು ಅವನ ಬೆಂಬಲಕ್ಕೆ ನಿಂತಿದ್ದು, “ನಾವು ಹಲವು ಬಾರಿ ಮನವಿ ಮಾಡಿದರೂ ಕೆಲಸ ಆಗ್ಲಿಲ್ಲ. ಇವಾಗ ಬಾಲಕ ಮೋದಿಯವರಿಗೆ ಪತ್ರ ಬರೆದಿದ್ದಾನೆ, ಕನಿಷ್ಠ ಇದಾದ್ರೂ ನಮ್ಮ ಭಾಗಕ್ಕೆ ಸೌಕರ್ಯ ಕಲ್ಪಿಸಲಿ” ಎಂದು ಆಶೆಯೊಂದಿಗೆ ಹೇಳುತ್ತಿದ್ದಾರೆ.

ಪ್ರಧಾನಿ ಕಚೇರಿಯಿಂದ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ಈ ಪ್ರದೇಶದ ದುಸ್ಥಿತಿ ಕೇಂದ್ರ ಮಟ್ಟಕ್ಕೆ ತಲುಪಿರುವುದರಿಂದ, ಜನರು ಮುಂದೆಯಾದು ಮೂಲ ಸೌಕರ್ಯ ಸಿಗುತ್ತದೆಯಾ ಎನ್ನುವ ಭರವಸೆಯನ್ನು ಇಟ್ಟುಕೊಂಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande