
ಕ್ವೆಟ್ಟಾ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಸಾನಿ-ಭಾಗ್ ನಡುವಿನ ಪ್ರದೇಶದಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯ ಬೆಂಗಾವಲು ಪಡೆಯ ಮೇಲೆ ಶನಿವಾರ ರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಬಂದೂಕುಧಾರಿಗಳು ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದರಿಂದ ಪ್ರದೇಶದಲ್ಲಿ ಕೆಲವು ಕ್ಷಣ ಗೊಂದಲದ ವಾತಾವರಣ ಉಂಟಾಯಿತು. ಪ್ರತಿಯಾಗಿ ಪೊಲೀಸರು ಕೂಡ ಗುಂಡು ಹಾರಿಸಿದ್ದಾರೆ,
ಪೋಲೀಸ್ ಮೂಲಗಳ ಪ್ರಕಾರ, ಎಸ್‌ಎಸ್‌ಪಿ ಮತ್ತು ಅವರೊಂದಿಗೆ ಇದ್ದ ಎಲ್ಲಾ ಪೊಲೀಸರಿಗೂ ಯಾವುದೇ ಅಪಾಯ ಉಂಟಾಗಿಲ್ಲ, ಅವರು ಸುರಕ್ಷಿತರಾಗಿದ್ದಾರೆ. ದಾಳಿಕೋರರು ಅಂಧಕಾರವನ್ನು ಸದುಪಯೋಗಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದು, ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ದಾಳಿಕೆಗೆ ಹಿನ್ನೆಲೆ
ಇತ್ತೀಚಿನ ಸರ್ಕಾರಿ ದಾಖಲೆ ದಹನ ಪ್ರಕರಣದ ತನಿಖೆಗಾಗಿ ಕಚ್ಚಿ ಎಸ್‌ಎಸ್‌ಪಿ ಹಾಜಿ ಶಹರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ತನಿಖೆಯಿಂದ ಹಿಂತಿರುಗುವ ಸಂದರ್ಭದಲ್ಲಿ ಈ ದುಷ್ಕೃತ್ಯ ನಡೆದಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa