
ಹಾಸನ, 16 ನವೆಂಬರ್ (ಹಿ.ಸ.) :
ಆ್ಯಂಕರ್ : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ದುದ್ದ ಉಪವಿಭಾಗ ವ್ಯಾಪ್ತಿಯಲ್ಲಿ ದೇವಿಹಳ್ಳಿ ನಿರಂತರ ಜ್ಯೋತಿ ಫೀಡರ್ ನಿರ್ವಹಣೆ ಕಾಮಗಾರಿಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ನ.18 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವಿಹಳ್ಳಿ, ಮೆಳ್ಳಳ್ಳಿ, ಬೆಳ್ಳಿಕೊಪ್ಪಲು, ಕಾರೆಕೆರೆ, ಬಲ್ಲೇನಹಳ್ಳಿ, ನೆಲ್ಲಕ್ಕಿಹಳ್ಳಿ, ಹೊಸೂರು, ಕಾರೆಕೆರೆ ಕಾವಲು, ಜುಂಜನಹಳ್ಳಿ, ಹೊಳಲು, ಮಲ್ಲನಾಯಕನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಾ.ವಿ.ಸ.ನಿ.ನಿ, ಹಾಸನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa