ಬೆಂಗಳೂರು : ನ.18 ರಂದು ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ - ಉಚಿತ ಪ್ರವೇಶ
ಬೆಂಗಳೂರು, 16 ನವೆಂಬರ್ (ಹಿ.ಸ.) : ಆ್ಯಂಕರ್ : ಹೆಸರಾಂತ ನಾಟಕಕಾರ,ಕವಿ ದಿ‌.ಪಿ.ಬಿ.ಧುತ್ತರಗಿ ಅವರ ರಚನೆಯ ಸಂಪತ್ತಿಗೆ ಸವಾಲ್ ನಾಟಕವನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಮತ್ತು ಕೊಪ್ಪಳ ಪತ್ರಕರ್ತರ ಬಳಗದ
ಬೆಂಗಳೂರು: ನ.18 ರಂದು ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ


ಬೆಂಗಳೂರು: ನ.18 ರಂದು ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ - ಉಚಿತ ಪ್ರವೇಶ


ಬೆಂಗಳೂರು, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಹೆಸರಾಂತ ನಾಟಕಕಾರ,ಕವಿ ದಿ‌.ಪಿ.ಬಿ.ಧುತ್ತರಗಿ ಅವರ ರಚನೆಯ ಸಂಪತ್ತಿಗೆ ಸವಾಲ್ ನಾಟಕವನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಮತ್ತು ಕೊಪ್ಪಳ ಪತ್ರಕರ್ತರ ಬಳಗದ ಹವ್ಯಾಸಿ ಕಲಾವಿದರು, ನವೆಂಬರ್ 18 ,ಮಂಗಳವಾರ ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಿದ್ದಾರೆ.

ಡಾ.ರಾಜಕುಮಾರ್ ಅಭಿನಯದಲ್ಲಿ ಸಿನೆಮಾ ಆಗಿ ಜನಪ್ರಿಯವಾಗಿದ್ದ ಈ ನಾಟಕದ ಮೂಲ ಕರ್ತೃ ಪಿ.ಬಿ.ಧುತ್ತರಗಿ ಅವರು.ದಿ.ಪಿ.ಬಿ.ಧುತ್ತರಗಿ ಮತ್ತು ಅವರ ಪತ್ನಿ ಹೆಸರಾಂತ ರಂಗನಟಿ ದಿ.ಸರೋಜಮ್ಮ‌ ಧುತ್ತರಗಿ ಅವರ ಸ್ಮರಣಾರ್ಥವಾಗಿ , ಅವರ ಮಕ್ಕಳಾದ ವಿರೂಪಾಕ್ಷಪ್ಪ ಧುತ್ತರಗಿ,ಶ್ರೀದೇವಿ ಮಲ್ಲಯ್ಯ ಕೋಮಾರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ .

ನ.18,ಮಂಗಳವಾರ ಸಂಜೆ 4 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ನಾಟಕ ಪ್ರದರ್ಶನವನ್ನು ಕನ್ನಡ, ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು,ಮಾಜಿಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಅಧ್ಯಕ್ಷತೆ ವಹಿಸುವರು,ಕುಷ್ಟಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ,ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜಮೂರ್ತಿ,ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ,ಅ.ಭಾ.ಶಸಾಪ ಅಧ್ಯಕ್ಷ ಡಾ.ಸಿ.ಸೋಮಶೇಖರ್,ಮಹೇಂದ್ರ ಮನೋಜ್ ಜೈನ್,ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ,ನ್ಯೂಸ್ 18 ಸಂಪಾದಕ ಹರಿಪ್ರಸಾದ್,ಝೀ ನ್ಯೂಸ್ ಸಂಪಾದಕ ರವಿ ಗೌಡರ್,ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ,ಉಪೇಂದ್ರ ಶೆಟ್ಟಿ,ಸಂಗಯ್ಯ ವಸ್ತ್ರದ,ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ,ಬಸವರಾಜ ಬಿನ್ನಾಳ,ಹನುಮಸಾಗರ ಗ್ರಾ.ಪಂ.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ್,ವಿಶ್ವನಾಥ ಕುನ್ನೂರ,ಸೂಚಪ್ಪ ದೇವರಮನಿ ಮತ್ತಿತರರು ಅತಿಥಿಗಳಾಗಿ ಆಗಮಿಸುವರು.

ಮಲ್ಲಯ್ಯ ಕೋಮಾರಿ ಪ್ರಾಸ್ತಾವಿಕ ನುಡಿಗನ್ನಾಡುವರು,ನಿಸರ್ಗ ಎಂ‌.ಕೋಮಾರಿ ಭರತನಾಟ್ಯ ಪ್ರದರ್ಶಿಸುವರು.

ಸಂಪತ್ತಿಗೆ ಸವಾಲ್ ನಾಟಕ ಸಿನೆಮಾ ಆಗಿ ಜನಪ್ರಿಯಗೊಂಡು ಯಶಸ್ವಿಯಾದ ಸಂಪತ್ತಿಗೆ ಸವಾಲ್ ಮೂಲ ನಾಟಕ ಕೃತಿಯ‌ನ್ನು , ವಿರೂಪಾಕ್ಷಪ್ಪ ಧುತ್ತರಗಿ ಹಾಗೂ ಬಸವರಾಜ ಬಿನ್ನಾಳ ನಿರ್ದೇಶನದಲ್ಲಿ ರಂಗಭೂಮಿಯ ಮೇಲೆ ಕೊಪ್ಪಳದ ಪತ್ರಕರ್ತರು ಅಭಿನಯಿಸಲಿದ್ದಾರೆ.

ಪಾತ್ರವರ್ಗ

ಭದ್ರಿ- ಜಗದೀಶ್ ಚೆಟ್ಟಿ,ಮರಿಯಪ್ಪ - ಶರಣಪ್ಪ ಬಾಚಲಾಪುರ,ವೆಂಕಪ್ಪ- ಬಸವರಾಜ ಬಿನ್ನಾಳ,ಕೆಂಚಪ್ಪ- ಮಹೇಶಗೌಡ ಭಾನಾಪುರ,ಸಂಗವ್ವ- ಸುನಂದಾ ಗೋಕಾಕ,ಲಕ್ಚ್ಮೀ- ರೋಜಾ ವಿ.ಚಿಮ್ಮಲ್,ಪಾರ್ವತಿ-ಹೇಮಾ ಗದಗ,ಸಿದ್ಧ-ಪರಮೇಶರಡ್ಡಿ ಹ್ಯಾಟಿ,ಭೈರ-ನಾಭಿರಾಜ ದಸ್ತೇನವರ್,ಫೌಜದಾರ್-ಬಸವರಡ್ಡಿ ಬೋಳರಡ್ಡಿ,ಗುಂಡ-ವೀರಣ್ಣ ಹಡಪದ ಸೇರಿದಂತೆ ಹಲವು ಕಲಾವಿದರು ಅಭಿನಯಿಸುವರು.

ಕ್ಷೀರಲಿಂಗ ಪುಲಾರಿ,ಶಂಕರ್ ಬಸೂದೆ ,ವಿರೇಶ್ ಚಿಮ್ಮಲ್ ಕಲ್ಲಗೋನಾಳ ಅವರು ವಾದ್ಯವೃಂದ ನಿರ್ವಹಿಸುವರು.

ಈ ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ ಅವಕಾಶವಿದ್ದು ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಲು ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande