ಬಳ್ಳಾರಿಯಲ್ಲಿ ನವೆಂಬರ್ 22 ಮತ್ತು 23 ರಂದು ವೆಟ್ರನ್ಸ್ ಅಥ್ಲೆಟಿಕ್‍ನ 45ನೇ ರಾಜ್ಯ ಮಟ್ಟದ ಕ್ರೀಡಾಕೂಟ
ಬಳ್ಳಾರಿ, 16 ನವೆಂಬರ್ (ಹಿ.ಸ.) : ಆ್ಯಂಕರ್ : ನವೆಂಬರ್ 22 ಮತ್ತು 23 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕದ ಜಂಟಿ ಸಹಯೋಗದಲ್ಲಿ ಎರಡು ದಿನಗಳ ವೆಟ್ರನ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ
ಬಳ್ಳಾರಿಯಲ್ಲಿ ನವೆಂಬರ್ 22 ಮತ್ತು 23 ರಂದು ವೆಟ್ರನ್ಸ್ ಅಥ್ಲೆಟಿಕ್‍ನ 45ನೇ ರಾಜ್ಯ ಮಟ್ಟದ ಕ್ರೀಡಾಕೂಟ


ಬಳ್ಳಾರಿ, 16 ನವೆಂಬರ್ (ಹಿ.ಸ.) :

ಆ್ಯಂಕರ್ : ನವೆಂಬರ್ 22 ಮತ್ತು 23 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕದ ಜಂಟಿ ಸಹಯೋಗದಲ್ಲಿ ಎರಡು ದಿನಗಳ ವೆಟ್ರನ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.

ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿಯ ಜಿಲ್ಲಾ ಅಧ್ಯಕ್ಷರಾದ ಶಾಂತಾಬಾಯಿ ಕಟ್ಟಿಮನಿ ಅವರು ಈ ಮಾಹಿತಿ ನೀಡಿದ್ದು, ಕ್ರೀಡಾಕೂಟದಲ್ಲಿ 30 ವರ್ಷದ ವಯಸ್ಸಿನಿಂದ ನೂರು ವರ್ಷ ವಯಸ್ಸಿನ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು. ಐದು ವಿಭಾಗಗಳಲ್ಲಿ ಈ ಕ್ರೀಡಾಕೂಟವನ್ನು ನಡೆಯಲಿದೆ. 100 ಮೀಟರ್ ನಿಂದ 5000 ಮೀಟರ್ ಓಟದ ಸ್ಪರ್ಧೆಗಳು, ಎಸೆತ ಹಾಗೂ ಜಿಗಿತದ ಸ್ಪರ್ಧೆಗಳು ನಡೆಯಲಿವೆ ಎಂದರು.

65 ವರ್ಷ ವಯಸ್ಸಿನ ಸ್ಪರ್ದಾಳುಗಳಿಗೆ ಕೆಲವೊಂದು ಆಟಗಳನ್ನು ನಿಷೇಧಿಸಲಾಗಿದೆ. ವಿಕಲಚೇತನರಿಗೆ ಸಹ ಈ ಕ್ರೀಡಾಕೂಟದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಗೆದ್ದವರಿಗೆ ಡಿಸೆಂಬರ್ 13 ಮತ್ತು 14 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದರು.

ಕ್ರೀಡಾಕೂಟದಲ್ಲಿ 60 ರಿಂದ 70 ತೀರ್ಪುಗಾರರು ಭಾಗವಹಿಸಲಿದ್ದಾರೆ. ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ವೇಣುಗೋಪಾಲ್, ಖಜಾಂಚಿಯಾದ ಡಿ.ಎಸ್. ದೊಡ್ಡಯ್ಯ, ಪ್ರಧಾನ ಕಾರ್ಯದರ್ಶಿಗಳಾದ ನಾಗಭೂಷಣ್, ಮುಖಂಡರಾದ ವಿಜಯ್, ಅಬ್ದುಲ್ ಮುನಫ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande