
ಕಠ್ಮಂಡು, 15 ನವೆಂಬರ್ (ಹಿ.ಸ.) :
ಆ್ಯಂಕರ್ : ವ್ಯಾಪಾರ ವೀಸಾದ ಮೇಲೆ ಅನುಮಾನಾಸ್ಪದವಾಗಿ ಚಟುವಟಿಕೆ ನಡೆಸುತ್ತಿದ್ದ ನಾಲ್ವರು ಚೀನೀ ಪ್ರಜೆಗಳನ್ನು ನೇಪಾಳ ವಲಸೆ ಇಲಾಖೆ ಬಂಧಿಸಿದೆ. ಒಬ್ಬ ಮಹಿಳೆ ಸೇರಿದಂತೆ ಮೂವರು ಪುರುಷರನ್ನು ಕಠ್ಮಂಡುವಿನ ಸೊಹ್ರ್ಖುಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ.
ಬಂಧಿತರು ಯಾವುದೇ ವ್ಯವಹಾರ ಮಾಹಿತಿ, ಕಂಪನಿಯ ಹೆಸರುಗಳನ್ನು ನೀಡಲು ವಿಫಲರಾಗಿದ್ದು, ಬಡ ನೇಪಾಳಿ ಯುವತಿಯರಿಗೆ ಟಿಕ್‌ಟಾಕ್ ವಿಡಿಯೋಗಳ ಆಮಿಷ ನೀಡಿ ಮದುವೆಯ ನೆಪದಲ್ಲಿ ಚೀನಾಕ್ಕೆ ಕರೆದೊಯ್ಯಲು ಯತ್ನಿಸಿದ ಶಂಕೆ ವ್ಯಕ್ತವಾಗಿದೆ.
ಇಬ್ಬರು ಕಳೆದ 10 ವರ್ಷಗಳಿಂದ ವಿವಿಧ ವೀಸಾಗಳಲ್ಲೇ ನೇಪಾಳದಲ್ಲಿ ವಾಸಿಸುತ್ತಿದ್ದರೂ, ಪಾಸ್‌ಪೋರ್ಟ್ ಮತ್ತು ದಾಖಲೆಗಳನ್ನು ತೋರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa