
ವಿಜಯಪುರ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಯಲ್ಟಿ ಜೊತೆಗೆ ಮರಳು ಸಾಗಾಟ ಮಾಡುವಾಗ ಯೂಟ್ಯೂಬ್ ವರದಿಗಾರ ಸೇರಿ ಇಬ್ಬರು ಟಿಪ್ಪರ ವಾಹನ ಚಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ರಸ್ತೆಯಲ್ಲಿ ನಡೆದಿದೆ.
ಯೂಟ್ಯೂಬ್ ವರದಿಗಾರ ಶಕ್ತಿಕುಮಾರ ಹಾಗೂ ಓರ್ವನ ವಿರುದ್ಧ ಕೇಸ್ ದಾಖಲಾಗಿದೆ. ಮುದ್ದೇಬಿಹಾಳದಿಂದ ವಿಜಯಪುರಕ್ಕೆ ಹೊರಟಿದ್ದ KA09 C8047 ನಂಬರಿನ ಟಿಪ್ಪರ ವಾಹನ ಚಾಲಕನಿಗೆ ಇಬ್ಬರು ಸೇರಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ.
ಅಕ್ರಮವಾಗಿ ಟಿಪ್ಪರನಲ್ಲಿ ಮರಳು ಸಾಗಾಟ ಮಾಡುತ್ತಿದ್ದಿಯಾ ಎಂದು ಧಮ್ಕಿ ಹಾಕಿದ್ದಾರೆ. 10 ಸಾವಿರ ಹಣ ಕೊಟ್ಟು ಸೆಟ್ಲಮೆಂಟ್ ಮಾಡಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ. ಟಿಪ್ಪರ ಚಾಲಕನ ಬಳಿಯಿದ್ದ 500 ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande