
ನವದೆಹಲಿ, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನವೆಂಬರ್ 14 ಮತ್ತು 15 ರಂದು ನಡೆಯಲಿರುವ 30ನೇ ಸಿಐಐ (ಭಾರತೀಯ ಕೈಗಾರಿಕಾ ಒಕ್ಕೂಟ) ಪಾಲುದಾರಿಕೆ ಶೃಂಗಸಭೆ 2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಶೃಂಗಸಭೆಯನ್ನು ಸಿಐಐ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಹಾಗೂ ಆಂಧ್ರಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ ಎಂದು ಉಪರಾಷ್ಟ್ರಪತಿ ಕಚೇರಿ ತಿಳಿಸಿದೆ.
ತಂತ್ರಜ್ಞಾನ, ವಿಶ್ವಾಸ ಮತ್ತು ವ್ಯಾಪಾರ, ಹೊಸ ಭೌಗೋಳಿಕ-ಆರ್ಥಿಕ ಕ್ರಮವನ್ನು ನ್ಯಾವಿಗೇಟ್ ಮಾಡುವುದು” ಎಂಬ ವಿಷಯದಡಿ ನಡೆಯುವ ಈ ಶೃಂಗಸಭೆಯಲ್ಲಿ ಚಿಂತಕರು, ನೀತಿ ನಿರೂಪಕರು, ಉದ್ಯಮ ನಾಯಕರು ಹಾಗೂ ಜಾಗತಿಕ ಪಾಲುದಾರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 45 ಅಧಿವೇಶನಗಳು, 72 ಅಂತಾರಾಷ್ಟ್ರೀಯ ಭಾಷಣಕಾರರು ಭಾಗವಹಿಸಲಿದ್ದು, 45 ದೇಶಗಳಿಂದ 300 ವಿದೇಶಿ ಪ್ರತಿನಿಧಿಗಳನ್ನು ಒಳಗೊಂಡು ಒಟ್ಟು 2,500 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa