
ವಾಷಿಂಗ್ಟನ್, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಸುಮಾರು 41 ದಿನಗಳಿಂದ ಅಮೆರಿಕದಲ್ಲಿ ಮುಂದುವರಿದ ಸರ್ಕಾರದ ಆಡಳಿತ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆ ಉಂಟಾಗಿದೆ.
ಬುಧವಾರ ಅಮೆರಿಕ ಸಂಸದರು ಸರ್ಕಾರದ ಆಡಳಿತ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಸೂದೆಗೆ ಪರವಾಗಿ ಮತ ಚಲಾಯಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯೊಂದಿಗೆ ಈ ಮಸೂದೆ ಕಾನೂನಾಗಿ ಜಾರಿಯಾಗಲಿದ್ದು, ಸರ್ಕಾರದ ಕಾರ್ಯಚಟುವಟಿಕೆಗಳು ಪುನರಾರಂಭವಾಗಲು ದಾರಿ ಸುಗಮವಾಗಲಿದೆ.
ಈ ದೀರ್ಘಕಾಲದ ಆಡಳಿತ ಬಿಕ್ಕಟ್ಟು ಲಕ್ಷಾಂತರ ಫೆಡರಲ್ ಉದ್ಯೋಗಿಗಳ ಸಂಬಳ ಸ್ಥಗಿತಗೊಂಡಿದ್ದವು, ಆಹಾರ ನೆರವು ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು ಮತ್ತು ವಿಮಾನ ಪ್ರಯಾಣಗಳಲ್ಲಿ ವಿಳಂಬ ಉಂಟಾಗಿತ್ತು.
ಕಾಂಗ್ರೆಸ್ಸು ಬುಧವಾರ ಅಂಗೀಕರಿಸಿದ ಈ ಮಸೂದೆ ಅಡ್ಡಿಪಡಿಸಿದ್ದ ಆಹಾರ ನೆರವು, ಫೆಡರಲ್ ಉದ್ಯೋಗಿಗಳ ಸಂಬಳ ಸೇರಿದಂತೆ ಪ್ರಮುಖ ಸೇವೆಗಳ ಪುನರುಜ್ಜೀವನಕ್ಕೆ ದಾರಿ ತೆರೆಯಲಿದೆ. ಇದರಿಂದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯೂ ಸಹ ಪುನಃ ಚುರುಕುಗೊಳ್ಳುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa