
ನವದೆಹಲಿ, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಭದ್ರತಾ ಕಾರಣಗಳಿಂದಾಗಿ ಮುಂದಿನ ಸೂಚನೆ ಬರುವವರೆಗೆ ಕೆಂಪು ಕೋಟೆ ಮೆಟ್ರೋ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ಗುರುವಾರ ಪ್ರಕಟಿಸಿದೆ.
ಡಿಎಂಆರ್‌ಸಿ ತನ್ನ ಅಧಿಕೃತ ‘ಎಕ್ಸ್’ ಪೋಸ್ಟ್‌ನಲ್ಲಿ “ಭದ್ರತಾ ಕಾರಣಗಳಿಂದಾಗಿ, ಮುಂದಿನ ಸೂಚನೆ ಬರುವವರೆಗೆ ಕೆಂಪು ಕೋಟೆ ಮೆಟ್ರೋ ನಿಲ್ದಾಣ ಮುಚ್ಚಲ್ಪಡುತ್ತದೆ. ಉಳಿದ ಎಲ್ಲಾ ನಿಲ್ದಾಣಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ತಿಳಿಸಿದೆ.
ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ಸಂಸ್ಥೆಗಳು ಘಟನೆಯ ಕುರಿತು ವ್ಯಾಪಕ ತನಿಖೆ ನಡೆಸುತ್ತಿವೆ.
ಸೋಮವಾರ ಸಂಜೆ ಸಂಭವಿಸಿದ ಈ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಇದರ ನಂತರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕೆಂಪು ಕೋಟೆ ಮೆಟ್ರೋ ನಿಲ್ದಾಣವು ದೆಹಲಿ ಮೆಟ್ರೋದ ವೈಲೆಟ್ ಲೈನ್‌ನಲ್ಲಿ ಪ್ರಮುಖ ತಾಣವಾಗಿದ್ದು, ಐತಿಹಾಸಿಕ ಕೆಂಪು ಕೋಟೆ, ಜಾಮಾ ಮಸೀದಿ, ಮತ್ತು ಚಾಂದನಿ ಚೌಕ್ ಪ್ರದೇಶಗಳಿಗೆ ಪ್ರವೇಶದ ಪ್ರಮುಖ ಕೇಂದ್ರವಾಗಿದೆ. ಈ ತಾತ್ಕಾಲಿಕ ಮುಚ್ಚುವಿಕೆಯಿಂದ ಹಳೆಯ ದೆಹಲಿಯ ಪ್ರಯಾಣಿಕರು ಹಾಗೂ ಪ್ರವಾಸಿಗರ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa