
ನವದೆಹಲಿ, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಮಾಲ್ಡೀವ್ಸ್ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗಾಗಿ ಉತ್ತಮ ಆಡಳಿತ, ಸ್ಮಾರ್ಟ್ ಸಿಟಿ ಅಭಿವೃದ್ಧಿ, ಸಾರ್ವಜನಿಕ ನೀತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರತದ ಅನುಭವವನ್ನು ಹಂಚಿಕೊಳ್ಳಲು ಸಿದ್ಧವಿದೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.
ಅವರು ನವದೆಹಲಿಯ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 30 ಸದಸ್ಯರ ಮಾಲ್ಡೀವ್ಸ್ ನಿಯೋಗವನ್ನು ಭೇಟಿಯಾಗಿ, ಭಾರತದ ಬಲಿಷ್ಠ ನಾಗರಿಕ ಸೇವಾ ವ್ಯವಸ್ಥೆ ಉತ್ತಮ ಆಡಳಿತದ ಮಾದರಿಯಾಗಿದೆ ಎಂದು ಹೇಳಿದರು.
ಮಾಲ್ಡೀವ್ಸ್ ರಾಜ್ಯ ಸಚಿವ ಅಹ್ಮದ್ ಸಲೀಮ್ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿ, “ಸ್ಮಾರ್ಟ್ ಸಿಟೀಸ್ ಮಿಷನ್ ಸುಸ್ಥಿರ ನಗರಾಭಿವೃದ್ಧಿಗೆ ಸ್ಪೂರ್ತಿದಾಯಕ ಮಾದರಿ ಎಂದು ಶ್ಲಾಘಿಸಿದರು.
2024 ಆಗಸ್ಟ್‌ನಿಂದ ನವೀಕರಿಸಿದ ಒಪ್ಪಂದದಡಿ ಭಾರತವು ಈಗಾಗಲೇ 1,200ಕ್ಕೂ ಹೆಚ್ಚು ಮಾಲ್ಡೀವ್ಸ್ ಅಧಿಕಾರಿಗಳಿಗೆ ತರಬೇತಿ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa