ರಫ್ತುದಾರರಿಗಾಗಿನ ಕ್ರೆಡಿಟ್ ಗ್ಯಾರಂಟಿ ಯೋಜನೆಗೆ ಸಚಿವ ಸಂಪುಟದ ಅನುಮೋದನೆ
ನವದೆಹಲಿ, 13 ನವೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಫ್ತುದಾರರಿಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ) ಪರಿಚಯಿಸಲು ತನ್ನ ಅನುಮೋದನೆ ನೀಡಿದೆ. ಎಂ.ಎಸ್‌.ಎಂ.ಇ ಗಳು ಸೇರಿದಂತೆ ಅರ್ಹ ರಫ್ತುದ
Pm


ನವದೆಹಲಿ, 13 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ರಫ್ತುದಾರರಿಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ) ಪರಿಚಯಿಸಲು ತನ್ನ ಅನುಮೋದನೆ ನೀಡಿದೆ.

ಎಂ.ಎಸ್‌.ಎಂ.ಇ ಗಳು ಸೇರಿದಂತೆ ಅರ್ಹ ರಫ್ತುದಾರರಿಗೆ 20,000 ಕೋಟಿ ರೂ. ವರೆಗೆ ಹೆಚ್ಚುವರಿ ಸಾಲ ಸೌಲಭ್ಯಗಳನ್ನು ವಿಸ್ತರಿಸಲು, ಸದಸ್ಯ ಸಾಲ ನೀಡುವ ಸಂಸ್ಥೆಗಳಿಗೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ ಮೂಲಕ 100% ಸಾಲ ಖಾತರಿ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದು ಆತ್ಮ ನಿರ್ಭರ ಭಾರತದ ಕನಸು ನನಸಾಗಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಎಕ್ಸ ಖಾತೆಯಲ್ಲಿ ತಿಳಿಸಿದ್ದಾರೆ.

ಎಂ.ಎಸ್‌.ಎಂ.ಇ ಗಳು ಸೇರಿದಂತೆ ಅರ್ಹ ರಫ್ತುದಾರರಿಗೆ ಹೆಚ್ಚುವರಿ ಸಾಲ ಬೆಂಬಲವನ್ನು ಒದಗಿಸಲು ಈ ಯೋಜನೆಯನ್ನು ಹಣಕಾಸು ಸೇವೆಗಳ ಇಲಾಖೆ (ಡಿ.ಎಫ್.ಎಸ್), ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (ಎನ್.‌ಸಿ.ಜಿ.ಟಿ.ಸಿ) ಮೂಲಕ ಅನುಷ್ಠಾನಗೊಳಿಸುತ್ತದೆ. ಹಣಕಾಸು ಸೇವೆಗಳ ಇಲಾಖೆಯ (ಡಿ.ಎಫ್.ಎಸ್) ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಲಾದ ನಿರ್ವಹಣಾ ಸಮಿತಿಯು ಈ ಯೋಜನೆಯ ಪ್ರಗತಿ ಮತ್ತು ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುತ್ತದೆ.

ಈ ಯೋಜನೆಯು ಭಾರತೀಯ ರಫ್ತುದಾರರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಹೊಸ ಹಾಗೂ ಉದಯೋನ್ಮುಖ ಮಾರುಕಟ್ಟೆಗಳಿಗೆ ವಿಸ್ತರಿಸಲು ಬೆಂಬಲ ನೀಡುವ ನಿರೀಕ್ಷೆಯಿದೆ. ಸಿ.ಜಿ.ಎಸ್.ಇ ಅಡಿಯಲ್ಲಿ ಮೇಲಾಧಾರ-ಮುಕ್ತ ಸಾಲ ಸೌಲಭ್ಯವನ್ನು ಒದಗಿಸುವುದರಿಂದ, ಇದು ದ್ರವ್ಯತೆಯನ್ನು ಬಲಪಡಿಸುತ್ತದೆ, ಸುಗಮ ವ್ಯಾಪಾರ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ ಮತ್ತು 1 ಟ್ರಿಲಿಯನ್ ಅಮೆರಿಕನ್ ಡಾಲರ್ ರಫ್ತು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಪ್ರಗತಿಯನ್ನು ಮತ್ತಷ್ಟು ದೃಢಪಡಿಸುತ್ತದೆ. ಇದು 'ಆತ್ಮನಿರ್ಭರ ಭಾರತ' ದ ಕಡೆಗಿನ ಭಾರತದ ಪಯಣವನ್ನು ಮತ್ತಷ್ಟು ಬಲಪಡಿಸಲಿದೆ.

ರಫ್ತು ವಲಯವು ಭಾರತೀಯ ಆರ್ಥಿಕತೆಯ ಒಂದು ನಿರ್ಣಾಯಕ ಸ್ತಂಭವಾಗಿದ್ದು, 2024-25ರ ಆರ್ಥಿಕ ವರ್ಷದಲ್ಲಿ ಜಿ.ಡಿ.ಪಿಯ ಸುಮಾರು 21% ರಷ್ಟನ್ನು ಹೊಂದಿದೆ ಮತ್ತು ವಿದೇಶಿ ವಿನಿಮಯ ಸಂಗ್ರಹಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ರಫ್ತು-ಆಧಾರಿತ ಉದ್ಯಮಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 45 ದಶಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದು, ಒಟ್ಟು ರಫ್ತುಗಳಲ್ಲಿ ಎಂ.ಎಸ್‌.ಎಂ.ಇಗಳ ಕೊಡುಗೆ ಸುಮಾರು 45% ರಷ್ಟಿದೆ. ಸುಸ್ಥಿರ ರಫ್ತು ಬೆಳವಣಿಗೆಯು ಭಾರತದ ಚಾಲ್ತಿ ಖಾತೆ ಸಮತೋಲನ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ರಫ್ತುದಾರರಿಗೆ ತಮ್ಮ ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಲು ಮತ್ತು ಭಾರತೀಯ ರಫ್ತುದಾರರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಅವರಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಸಾಕಷ್ಟು ಸಮಯವನ್ನು ನೀಡುವುದು ಮುಖ್ಯವಾಗಿದೆ. ಅದರಂತೆ, ಹೆಚ್ಚುವರಿ ದ್ರವ್ಯತೆ ಬೆಂಬಲವನ್ನು ಒದಗಿಸಲು ಸರ್ಕಾರದ ಈ ಪೂರ್ವಭಾವಿ ಹಸ್ತಕ್ಷೇಪವು, ವ್ಯವಹಾರದ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಮತ್ತು ಮಾರುಕಟ್ಟೆಗಳ ವಿಸ್ತರಣೆಗೆ ಸಹಕಾರಿಯಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande