
ಹುಬ್ಬಳ್ಳಿ, 13 ನವೆಂಬರ್ (ಹಿ.ಸ.) :
ಆ್ಯಂಕರ್ : ಹಾಗಲಕಾಯಿ ಎಂದರೆ ಅನೇಕರಿಗೆ ಕಹಿ ಎನಿಸುವ ತರಕಾರಿ. ಆದರೆ ಇದೇ ಹಾಗಲಕಾಯಿಯಿಂದ ತಯಾರಾಗುವ ಒಂದು ವಿಶಿಷ್ಟ ಗೋವಾ ಮಾದರಿಯ ಹಾಗಲಕಾಯಿ ಫ್ರೈ ಊಟದಲ್ಲಿ ಉತ್ತಮ ರುಚಿ ನೀಡುತ್ತದೆ.
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – 5
ರವೆ ಅಥವಾ ಒರಟಾದ ಅಕ್ಕಿ ಹಿಟ್ಟು – ¼ ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿನ ಪುಡಿ – ½ ಚಮಚ
ಉಪ್ಪು – 1 ಚಮಚ
ನಿಂಬೆ – 1
ಎಣ್ಣೆ – 4 ಚಮಚ
ಮಾಡುವ ವಿಧಾನ:
ಮೊದಲಿಗೆ ಹಾಗಲಕಾಯಿಯ ಸಿಪ್ಪೆ ತೆಗೆದು ಮತ್ತು ತೆಳುವಾದ ಉದ್ದದ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿದ ತುಂಡುಗಳಿಗೆ ಉಪ್ಪು ಹಾಗೂ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷಗಳ ಕಾಲ ನೆನಸಬೇಕು. ಈ ಪ್ರಕ್ರಿಯೆಯಿಂದ ಹಾಗಲಕಾಯಿಯ ಕಹಿತನ ಕಡಿಮೆಯಾಗುತ್ತದೆ.
ನಂತರ ರವೆ ಅಥವಾ ಅಕ್ಕಿ ಹಿಟ್ಟಿಗೆ ಅರಿಶಿನ ಹಾಗೂ ಕೆಂಪು ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ . ಹಾಗಲಕಾಯಿಯಿಂದ ಬಿಡುಗಡೆಯಾದ ನೀರನ್ನು ಹರಿಸಿ, ಅವುಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಚೆನ್ನಾಗಿ ಬೆರೆಯುವಂತೆ ಮಿಶ್ರಣ ಮಾಡಿ.
ಕಾದ ಎಣ್ಣೆಯಲ್ಲಿ ಈ ತುಂಡುಗಳನ್ನು ಬಿಟ್ಟು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಫ್ರೈ ಮಾಡಿದ ನಂತರ ಕಿಚನ್ ಪೇಪರ್‌ನಲ್ಲಿ ಇಟ್ಟು ಹೆಚ್ಚುವರಿ ಎಣ್ಣೆ ತೆಗೆದುಹಾಕಿ.
ಕಹಿತನ ಕಡಿಮೆ, ರುಚಿ ಹೆಚ್ಚಿರುವ ಈ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಊಟದೊಂದಿಗೆ ಅಥವಾ ಸಂಜೆ ತಿಂಡಿಯಾಗಿ ಸವಿಯಲು ಉತ್ತಮ. ಈ ತಿನಿಸು ಆರೋಗ್ಯಕರ ಮತ್ತು ರುಚಿಕರ ಎರಡೂ ಆಗಿದ್ದು, ತರಕಾರಿಯ ಪ್ರೀತಿಯವರಷ್ಟೇ ಅಲ್ಲ, ಹಾಗಲಕಾಯಿ ಇಷ್ಟವಿಲ್ಲದವರಿಗೂ ಮನಸೂರೆಗೊಳಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa