14ರಂದು ಸಿದ್ದಾರೂಢ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ
ಕೊಪ್ಪಳ, 11 ನವೆಂಬರ್ (ಹಆ್ಯಂಕರ್ : ನವೆಂಬರ್ 14 ರಂದು ಸಂಜೆ 5-30ಕ್ಕೆ ತಾಲೂಕಿನ ದದೇಗಲ್ ಗ್ರಾಮದಲ್ಲಿ ಶ್ರೀ ಜಗದ್ಗುರು ಸಿದ್ದಾರೂಢ ಮಹಾಸ್ವಾಮಿಗಳ 36ನೇ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ 22ನೇ ವರ್ಷದ ಪುಣ್ಯಾರಾಧನೆ, ಸಾಮೂಹಿಕ ವಿವಾಹ ಮತ್ತು ಮಹಾರಥೋತ್ಸವ ಜರುಗಲಿದೆ
14ರಂದು ಸಿದ್ದಾರೂಢ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ


14ರಂದು ಸಿದ್ದಾರೂಢ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ


ಕೊಪ್ಪಳ, 11 ನವೆಂಬರ್ (ಹಆ್ಯಂಕರ್ : ನವೆಂಬರ್ 14 ರಂದು ಸಂಜೆ 5-30ಕ್ಕೆ ತಾಲೂಕಿನ ದದೇಗಲ್ ಗ್ರಾಮದಲ್ಲಿ ಶ್ರೀ ಜಗದ್ಗುರು ಸಿದ್ದಾರೂಢ ಮಹಾಸ್ವಾಮಿಗಳ 36ನೇ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ 22ನೇ ವರ್ಷದ ಪುಣ್ಯಾರಾಧನೆ, ಸಾಮೂಹಿಕ ವಿವಾಹ ಮತ್ತು ಮಹಾರಥೋತ್ಸವ ಜರುಗಲಿದೆ ಎಂದು ದದೇಗಲ್‌ನ ಸಿದ್ದಾರೂಢ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷರಾದ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು. ಹಂಪಿ ಹೇಮಕೂಟದ ಶ್ರೀ ಶಿವರಾಮ ಅವಧೂತ ಆಶ್ರಮದ ಸದ್ಗುರು ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಕೊಪ್ಪಳದ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮಿಗಳು, ಚಿಕೇನಕೊಪ್ಪ ಶ್ರೀ ಶಂಭುಲಿಂಗಾರೂಢಮಠದ ಶ್ರೀ ಅನ್ನದಾನಿ ಭಾರತಿ ಮಹಾಸ್ವಾಮಿಗಳು, ಕುಕನೂರು ಅನ್ನದಾನೇಶ್ವರ ಶಾಖಾಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಮಹಾದೇವ ದೇವರು, ಭಾಗ್ಯನಗರ ಶಂಕರಾಚಾರ್ಯಮಠದ ಶಿವಪ್ರಕಾಶನಂದ, ಶಿವರಾಮಕೃಷ್ಣಾನಂದ ಮಹಾಸ್ವಾಮಿಗಳು, ಗದಗ-ಬೆಟಗೇರಿಯ ಮುಖಣೇಶ್ವರಮಠದ ಶಂಕರಾನಂದ ಸ್ವಾಮಿಗಳು, ಬಸಾಪುರ ಸಿದ್ದಾರೂಢಮಠದ ಶ್ರೀ ಪ್ರಣವಾನಂದ ಸ್ವಾಮಿಗಳು, ಈರಣ್ಣ ಹುರಕಡ್ಲಿ, ಅಭಿನವ. ಅಜ್ಜಪ್ಪ ಹುರಕಡ್ಲಿ, ಶರಣಪ್ಪ ಗುದಗಿ, ಮುದುಕಪ್ಪಜ್ಜ ಮೂಗಿನ್, ಕುಮಾರಪ್ಪಜ್ಜ ಬಂಡಿ ವೇದಾಂತ ಉಪನ್ಯಾಸ ನೀಡುವರು. ದದೇಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಆಗಮಿಸಿ, ಪಾಲ್ಗೊಂಡು ಸಿದ್ದಾರೂಢರ ಕೃಪೆಗೆ ಪಾತ್ರರಾಗುವಂತೆ ಶ್ರೀ ಆತ್ಮಾನಂದ ಭಾರತಿ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande