
ನವದೆಹಲಿ, 11 ನವೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿಯ ಗಾಳಿಯ ಗುಣಮಟ್ಟವು ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮಂಗಳವಾರ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP)ಯ ಮೂರನೇ ಹಂತವನ್ನು ಜಾರಿಗೆ ತಂದಿದೆ. ಇದರಡಿ ಹಲವು ಕಠಿಣ ಮಾಲಿನ್ಯ ವಿರೋಧಿ ಕ್ರಮಗಳನ್ನು ವಿಧಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 425 (ತೀವ್ರ) ಮಟ್ಟ ತಲುಪಿದ ಬಳಿಕ ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಈ ನಿರ್ಧಾರ ಕೈಗೊಂಡಿದೆ. ಶಾಂತ ಗಾಳಿ, ಸ್ಥಿರ ವಾತಾವರಣ ಮುಂತಾದ ಹವಾಮಾನ ಅಂಶಗಳು ಮಾಲಿನ್ಯಕಾರಕಗಳನ್ನು ನೆಲಮಟ್ಟದಲ್ಲಿ ತಡೆಹಿಡಿಯಲು ಕಾರಣವಾಗಿವೆ ಎಂದು CAQM ಸ್ಪಷ್ಟಪಡಿಸಿದೆ.
ವಾಯು ಗುಣಮಟ್ಟ ಸುಧಾರಣೆಗೆ ವಿಧಿಸಿರುವ ನಿರ್ಬಂಧಗಳು:
BS-3 ಪೆಟ್ರೋಲ್ ಮತ್ತು BS-4 ಡೀಸೆಲ್ ವಾಹನಗಳ ನಿಷೇಧ,
ಅನಿವಾರ್ಯವಲ್ಲದ ನಿರ್ಮಾಣ ಹಾಗೂ ಧ್ವಂಸ ಕಾರ್ಯಗಳಿಗೆ ತಾತ್ಕಾಲಿಕ ನಿಷೇಧ,
ಮಧ್ಯಮ ಗಾತ್ರದ ಸರಕು ವಾಹನಗಳ ಸಂಚಾರ ನಿಷೇಧ
ತರಗತಿ 5 ವರೆಗಿನ ಶಾಲಾ ಮಕ್ಕಳಿಗೆ ಹೈಬ್ರಿಡ್ ಅಥವಾ ಆನ್‌ಲೈನ್ ಮೋಡ್ ಅನಿವಾರ್ಯ
ಇಟ್ಟಿಗೆ ಗೂಡುಗಳು, ಡೀಸೆಲ್ ಜನರೇಟರ್‌ಗಳು ಮತ್ತು ಇತರ ಕೈಗಾರಿಕಾ ಚಟುವಟಿಕೆಗಳ ಮೇಲಿನ ನಿಷೇಧ ಹೇರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa