ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ : ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ಕೊಪ್ಪಳ, 10 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶದ ರಕ್ಷಣೆಯ ದೃಷ್ಟಿಯಿಂದ ನಮ್ಮ ಯೋಧರ ಸುರಕ್ಷತೆ ಎಷ್ಟು ಮುಖ್ಯ, ಅದೇ ರೀತಿ ನಮ್ಮ ದೇಶದ ಅಭಿವೃದ್ಧಿ ಹಾಗೂ ಜನರ ನೆಮ್ಮದಿ ಜೀವನಕ್ಕೆ ವಿದ್ಯುತ್ ವೀರರು ಅಷ್ಟೇ ಮುಖ್ಯ ಹಾಗಾಗಿ ಅವರ ಸುರಕ್ಷತೆ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ಅಪರ ಜಿಲ
ಕೊಪ್ಪಳ: ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ: ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ: ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ರಕ್ಷಣೆಯ ದೃಷ್ಟಿಯಿಂದ ನಮ್ಮ ಯೋಧರ ಸುರಕ್ಷತೆ ಎಷ್ಟು ಮುಖ್ಯ, ಅದೇ ರೀತಿ ನಮ್ಮ ದೇಶದ ಅಭಿವೃದ್ಧಿ ಹಾಗೂ ಜನರ ನೆಮ್ಮದಿ ಜೀವನಕ್ಕೆ ವಿದ್ಯುತ್ ವೀರರು ಅಷ್ಟೇ ಮುಖ್ಯ ಹಾಗಾಗಿ ಅವರ ಸುರಕ್ಷತೆ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಅವರು ಸೋಮವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಮಾರ್ಗದಾಳುಗಳು ಮತ್ತು ನಿರ್ವಹಣಾ ಸಿಬ್ಬಂದಿಗೆ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಅಭಿವೃದ್ಧಿಗೆ ವಿದ್ಯುತ್ ಬಹಳ ಮುಖ್ಯ, ವಿದ್ಯುತ್ ಇಲ್ಲದೆ ಯಾವುದೇ ಅಭಿವೃದ್ಧಿ ಊಹಿಸಿಕೊಳ್ಳಲು ಸಾದ್ಯವಿಲ್ಲ. ಆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು ಅಭಿವೃದ್ಧಿಗೆ ಕಾರಣವಾಗಿರುವ ವಿದ್ಯುತ್ ಮಾರ್ಗದಾಳುಗಳು ಮತ್ತು ನಿರ್ವಹಣಾ ಸಿಬ್ಬಂದಿಗಳ ಸುರಕ್ಷತೆಯು ಮುಖ್ಯವಾಗಿದೆ. ವಿದ್ಯುತ್ ಇಲ್ಲದೆ ಇರುವ ಗಳಿಗೆ ನೆನಪಿಸಿಕೊಳುವುದು ಸಾದ್ಯ ವಿಲ್ಲ. ಚಳಿಗಾಲ, ಮಳೆಗಾಲ ಹಾಗೂ ಬೇಸಿಗೆಕಾಲ ಈ ಮೂರು ಕಾಲಗಳಲ್ಲಿ ವಿದ್ಯುತ್ ಇಲ್ಲದೆ ಇರಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾವುದೆ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿರುವ ವಿದ್ಯುತ್ ವೀರರು ನೀವು. ನಿಮ್ಮ ಸುರಕ್ಷತೆ ಬಹಳ ಮುಖ್ಯ. ಕೆಲಸದ ಸಮಯದಲ್ಲಿ ಸುರಕ್ಷಿತ ಉಪಕರಣ ಹಾಗೂ ಸುರಕ್ಷತೆ ಕ್ರಮಗಳನ್ನು ಬಳಸಿ ಎಂದರು.

ಪ್ರತಿ ನಿಮಿಷದ ನಿಮ್ಮ ಕೆಲಸದಲ್ಲಿ ಜಾಗರುಕತೆ ಇರಲಿ, ನಿವು ಕೇವಲ ಜನರಿಗೆ ಬೆಳಕು ನಿಡುವುದಷ್ಟೆ ಅಲ್ಲ, ನಿಮ್ಮ ಹಿಂದೆ ಹಿರುವ ನಿಮ್ಮ ಕುಟುಂಬವನ್ನು ನೋಡಿಕೊಳ್ಳುವುದು ಸಹ ನಿಮ್ಮ ಜವಾಬ್ದಾರಿಯಾಗಿದೆ. ಹಾಹಾಗಿ ನೀವು ಬಹಳ ಸುರಕ್ಷತೆಯಿಂದ ಕೆಲಸ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿ ವಿದ್ಯುತ್ ಅಪಘಾತ ಜರುಗದಂತೆ ನೋಡಿಕೊಳ್ಳಲು ಆದಷ್ಟು ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಎಂದು ಹೇಳಿದರು.

ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಫಣಿರಾಜೇಶ್ ಅವರು ಮಾತನಾಡಿ, ಲೈನ್ ಮ್ಯಾನ್‌ಗಳ ಕಾರ್ಯ ಪ್ರಮುಖವಾಗಿದೆ. ಪವರ್ ಮ್ಯಾನ್‌ಗಳು ಮೊದಲು ನಿಮ್ಮ ಜೀವಕ್ಕೆ ನೀವು ಬೆಲೆ ಕೋಡಬೇಕು. ನೀವು ಕೆಲಸ ಮಾಡುತ್ತಿರುವುದು, ಕರೇಂಟ್ ಜೊತೆಗೆ ಹಾಗಾಗಿ ನಿಮ್ಮ ಕೆಲಸದ ಸಮಯದಲ್ಲಿ ಆದಷ್ಟೂ ಸುರಕ್ಷಿತವಾಗಿರಿ. ಸುರಕ್ಷತೆ ಉಪಕರಣಗಳನ್ನು ಬಳಸಿ, ನಿಮ್ಮ ಸುರಕ್ಷತೆಗಾಗಿ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಎಲ್ಲಾ ಲೈನ್ ಮ್ಯಾನ್‌ಗಳು ತರಬೇತಿಯ ಸದುಪಯೋಗ ಪಡೆದುಕೊಂಡು ಸುರಕ್ಷತೆ ಜೊತೆಗೆ ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು. ಈ ತರಬೇಯಿಂದ ತಾವು ವಿದ್ಯುತ್ತಿನ ಕೆಲಸವನ್ನು ಸುರಕ್ಷತೆಯಿಂದ ಹೇಗೆ ಮಾಡಬೇಕು ಎಂದು ಕಲಿಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೊಪ್ಪಳ ವೃತ್ತದ ಜೆಸ್ಕಾಂ ಅಧೀಕ್ಷಕ ಅಭಿಯಂತರರಾದ ರಮೇಶ್ ಅವರು ಮಾತನಾಡಿ, ವಿದ್ಯುತ್ ಇಲಾಖೆಯ ನೌಕರರು ವಿದ್ಯುತ್ ಕೆಲಸವನ್ನು ಮಾಡುವಾಗ ಅತ್ಯಂತ ಸುರಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಲೈನ್ ಮ್ಯಾನ್‌ಗಳಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗ ಪಡೆದುಕೊಂಡು ಸುರಕ್ಷತೆ ಜೊತೆಗೆ ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಮೊಟ್ಲಾ ನಾಯ್ಕ್ ಅವರು ಜಾಗೃತಿ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿ, ನಿಮ್ಮ ಸುರಕ್ಷಿತೆ ಜತೆಗೆ ನಿಮ್ಮ ಕುಟುಂಬದ ಸುರಕ್ಷಿತೆಯೂ ನಿಮ್ಮ ಹಿಂದೆ ಇರುತ್ತದೆ. ಹಾಗಾಗಿ ನೀವು ಕೆಲಸ ಮಾಡುವಾಗ ಮೊದಲು ಕಡ್ಡಾಯವಾಗಿ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಕೆಲಸದಲ್ಲಿ ಮೊದಲು ತಾಳ್ಮೆ ಇರಲಿ, ಅವಸರದಲ್ಲಿ ಕೆಲಸವನ್ನು ಮಾಡದಿರಿ ಕೆಲಸದಲ್ಲಿ ಅವಸರ ಮಾಡಿದರೆ ಕಂಡಿತ ಅವಗಡ ಸಂಭವಿಸುತ್ತದೆ. ಜನರಿಗೆ ಬೆಳಕು ನೀಡಲು, ನಿಮ್ಮ ಇರುವಿಕೆ ಬಹಳ ಮುಖ್ಯ ಹಾಗಾಗಿ ಜಾಗರೂಕತೆಯಿಂದ ಕೆಲಸ ಮಾಡಿ ಎಂದು ಹೇಳಿದರು.

ಹುತಾತ್ಮರಾದ ಪವರ್ ಮ್ಯಾನ್‌ಗಳಿಗೆ ಗೌರವ ಸಮರ್ಪಣೆ: ಇದೇ ವೇಳೆ ಒಂದು ನಿಮಿಷಗಳ ಕಾಲ ಮೌನ ಆಚರಿಸಿ ವಿದ್ಯುತ್ ಅಪಘಾತದಲ್ಲಿ ಹುತಾತ್ಮರಾದ ಪವರ್ ಮ್ಯಾನ್‌ಗಳಿಗೆ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯದ್ ಯುನೂಸ್, ಎಂ. ನಾಗರಾಜ್, ಮಹಮ್ಮದ್ ಕಲಿಮುದ್ದಿನ್, ಸಂತೋಷ ಕುಮಾರ, ಬಿ.ಆರ್. ದೇಸಾಯಿ, ರಾಜೇಶ್ ಎ.ಎಂ., ಬಿ.ವೆಂಕಟೇಶ್ ಹಾಗೂ ಎಸ್.ಎನ್. ಕುರಿ, ವಿದ್ಯುತ್ ಪರಿವೀಕ್ಷಕರಾದ ಸಂತೋಷ ಕುಮಾರ್, ಲೆಕ್ಕಾಧಿಕಾರಿ ರಫೀಕ್ ಅಹ್ಮದ್, ಸಹಾಯಕ ಲೆಕ್ಕಾಧಿಕಾರಿ ಯುನೂಸ್ ಖಾನ್, ಕ.ವಿ.ಪ್ರ.ನಿ ನೌಕರರ ಸಂಘದ ಪದಾಧಿಕಾರಿಗಳಾದ ನಾಗರಾಜ ಗಾಯಕವಾಡ್, ಮನೋಹರ, ಹನುಮಂತಪ್ಪ ಹುನಗುಂದ, ಅನಾಳಪ್ಪ, ಕಲ್ಲಪ್ಪ ಸೂಡಿ ಸೇರಿದಂತೆ, ಕೊಪ್ಪಳ ವಿಭಾಗದ ಎಲ್ಲಾ ಶಾಖಾಧಿಕಾರಿಗಳು ಹಾಗೂ ಜೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಲೈನ್ ಮ್ಯಾನ್‌ಗಳಿಗೆ ವಿದ್ಯುತ್ ಸುರಕ್ಷತಾ ಜಾಗೃತಿ : ಕಾರ್ಯಾಗಾರದಲ್ಲಿ ಡಾ ಶಿವಪ್ಪ ಎಸ್., ಬಿ.ಆರ್ ದೇಸಾಯಿ, ವೆಂಕಟೇಶ್, ಮಹಮ್ಮದ್ ಕಲಿಮುದ್ದಿನ್, ಸಂತೋಷ ಕುಮಾರ್ ಹಾಗೂ ಮತ್ತಿತರರು ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮೆಕಾನಿಕ್, ಮಾರ್ಗದಾಳು, ಸಹಾಯಕ ಮಾರ್ಗದಾಳು ಹಾಗೂ ಕಿರಿಯ ಮಾರ್ಗದಾಳುಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಕಿರಿಯ ಅಭಿಯಂತರರಾದ ಗಿರೀಶ್ ಎಂ. ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande