
ಬಳ್ಳಾರಿ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಎನ್. ವೀರಭದ್ರಗೌಡ ಅವರು ಆಯ್ಕೆಯಾಗಿದ್ದಾರೆ.
ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 95 ಸದಸ್ಯ ಮತದಾರರಲ್ಲಿ 93 ಸದಸ್ಯರು ಮತ ಚಲಾವಣೆ ಮಾಡಿದ್ದಾರೆ. ಹಿರಿಯ ಪತ್ರಕರ್ತರಾದ ಎಸ್.ನಾಗರಾಜ್ ಅವರು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿ, ಸಿದ್ದರಾಮ ಪೂಜಾರ್ ಮತ್ತು ಸಹಾಯಕ ವಕೀಲ ಮಂಜುನಾಥ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುವರ್ಣ ವಾಹಿನ ಪತ್ರಿಕೆಯ ಸಂಪಾದಕ ವಿ. ರವಿ ಅವರ ವಿರುದ್ಧ ಎನ್. ವೀರಭದ್ರಗೌಡ ಅವರು 23 ಮತಗಳ ಅಂತರದಿಂದ ಜಯ ಸಾಧಿಸಿದರು.
ಎನ್. ವೀರಭದ್ರಗೌಡ ಅವರಿಗೆ 58 ಮತಗಳು ಚಲಾವಣೆ ಆಗಿದ್ದು, ವಿ. ರವಿ ಅವರಿಗೆ 35 ಮತಗಳು ಚಲಾವಣೆ ಆಗಿವೆ.
ಮೂರು ಉಪಾಧ್ಯಕ್ಷ ಸ್ಥಾನಗಳಿಗೆ ಎನ್. ಗುರುಶಾಂತ, ಮಲ್ಲಯ್ಯ ಕೆ. ಮತ್ತು ಎ.ವಾಗೀಶ್. ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಕುಲಕರ್ಣಿ, ಖಜಾಂಚಿಯಾಗಿ ಕೆ. ಅಶೋಕ್ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ್ ಹೆಚ್ ಅವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ: ರೇಣುಕಾರಾಧ್ಯ, ಅಮರೇಶ ಎಲ್.ಕೆ., ಪುರುಷೋತ್ತಮ ಹಂದ್ಯಾ, ರಮೇಶ್ ಉಪ್ಪಾರ್, ಮಂಜುನಾಥ ಕೆ.ಎಂ., ಕಿನ್ನೂರೇಶ್ವರ ಎಸ್., ಹುಲುಗಣ್ಣ ಹೆಚ್, ಶ್ರೀನಿವಾಸ್. ಟಿ, ಈರೇಶ. ಟಿ, ಶಿವಾನಂದ ಮದಿಹಳ್ಳಿ, ಚಂದ್ರಶೇಖರಗೌಡ. ಜಿ, ಸತೀಶ್ .ಬಿ, ನಂದೀಶ್ ಕುಮಾರ್, ಶಿವಕುಮಾರ್, ಯರಿಸ್ವಾಮಿ .ಬಿ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಸ್ಥಾನಗಳಿಗೆ ದ್ಯಾಮನಗೌಡ ಪಾಟೀಲ್, ಎಂ.ಈ. ಜೋಷಿ ಹಾಗು ಪಿ. ರಘುರಾಂ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್